

ಕನ್ನಡ ಚಿತ್ರರಂಗದ ದೊಡ್ಮನೆ ಮೊಮ್ಮಗಳ ವಿವಾಹ ಮಹೋತ್ಸವಕ್ಕೆ ಸಾಕ್ಷಿಯಾಗುತ್ತಿದೆ. ಇದೇ ತಿಂಗಳು 31ರಂದು ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ವಿವಾಹ ನಡೆಯಲಿದೆ. ಅಂದಹಾಗೆ ಈ ಅದ್ದೂರಿ ಮದುವೆ ನಟ ಶಿವರಾಜ್‍ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ದಂಪತಿ ಪುತ್ರಿ ಡಾ.ನಿರುಪಮಾ ಅವರದ್ದು.
ಡಾ.ದಿಲೀಪ್ ಅವರನ್ನು ನಿರುಪಮಾ ವರಿಸಲಿದ್ದು, ಈ ವಿವಾಹಕ್ಕೆ ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಚಿತ್ರರಂಗದ ಗಣ್ಯರು ಆಗಮಿಸುತ್ತಿದ್ದಾರೆ. ಸಿನಿಮಾ ಕುಟುಂಬದ ಮದುವೆ ಎಂದ ಮೇಲೆ ಅಭಿಮಾನಿಗಳ ನೂಕು ನುಗ್ಗಲು ಇದ್ದಿದ್ದೇ. ಆದರೆ, ತಮ್ಮ ಮಗಳ ಮದುವೆಯಲ್ಲಿ ಅಭಿಮಾನಿಗಳು ಆ ರೀತಿ ಕಷ್ಟಪಡಬಾರದೆಂದು ಶಿವರಾಜ್‍ಕುಮಾರ್ ಒಂದು
ಐಡಿಯಾ ರೂಪಿಸಿದ್ದಾರೆ.
ದೇಶ- ವಿದೇಶದಲ್ಲಿರುವವರು ಕೂತಲ್ಲೇ ಶಿವಣ್ಣನ ಮಗಳ ಮದುವೆಗೆ ಶುಭ ಕೋರಬಹುದು. ಪ್ರತಿಯೊಬ್ಬರ ಪ್ರೀತಿಯ ಮಾತುಗಳನ್ನು ಓದುವುದಕ್ಕಾಗಿಯೇ ಒಂದು ವೆಬ್‍ಸೈಟ್ ಆರಂಭಿಸಿದ್ದು, ಈ ವೆಬ್‍ಗೆ ಲಾಗ್‍ಇನ್ ಆಗಿ ಅಲ್ಲಿ ತಮ್ಮ ಶುಭ ಸಂದೇಶ ನೀಡಬಹುದು. ಜತೆಗೆ
ಈ ವೆಬ್‍ಸೈಟ್‍ನಲ್ಲಿ ವಿವಾಹಕ್ಕೆ ಸಂಬಂಧಿಸಿದ ವಿಡಿಯೋ ಹಾಗೂ ಫೋಟೋಗಳನ್ನು ಅಪ್‍ಲೋಡ್ ಮಾಡಲಾಗುತ್ತದೆ. ವೆಬ್‍ಸೈಟ್ ವಿಳಾಸ: shivannamagalamaduve.com.