ನಟಿ ನಯನತಾರಾ ವಿರುದ್ಧ ಸಿಂಬು ದೂರು..?

ದಕ್ಷಿಣ ಭಾರತದ ಖ್ಯಾತ ನಟಿ ನಯನತಾರಾ ವಿರುದ್ಧ ನಟ ಸಿಂಬು ದೂರು ದಾಖಲಿಸಿದ್ದಾರೆ ಎಂದು ಹೇಳಲಾಗುತ್ತಿದೆ...
"ಇದು ನಮ್ಮ ಆಳು" ಚಿತ್ರದಲ್ಲಿ ಸಿಂಬು ಮತ್ತು ನಯನತಾರಾ (ಸಂಗ್ರಹ ಚಿತ್ರ)
"ಇದು ನಮ್ಮ ಆಳು" ಚಿತ್ರದಲ್ಲಿ ಸಿಂಬು ಮತ್ತು ನಯನತಾರಾ (ಸಂಗ್ರಹ ಚಿತ್ರ)
Updated on: 

ಚೆನ್ನೈ: ದಕ್ಷಿಣ ಭಾರತದ ಖ್ಯಾತ ನಟಿ ನಯನತಾರಾ ವಿರುದ್ಧ ನಟ ಸಿಂಬು ದೂರು ದಾಖಲಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಆರಂಭದಿಂದಲೂ ಹಲವು ವಿವಾದಗಳಿಂದಲೇ ಸುದ್ದಿಗೆ ಗ್ರಾಸವಾಗುತ್ತಿರುವ ಇದು ನಮ್ಮ ಆಳು ಚಿತ್ರ ಇದೀಗ ಮತ್ತೆ ವಿವಾದಕ್ಕೆ ಕಾರಣವಾಗಿದ್ದು, ಈ ಬಾರಿ ಚಿತ್ರದ ನಾಯಕಿ ನಯನತಾರಾರಿಂದಾಗಿ ಚಿತ್ರ  ಸುದ್ದಿಗೆ ಗ್ರಾಸವಾಗುತ್ತಿದೆ. ಮೂಲಗಳ ಪ್ರಕಾರ ಒಂದು ಕಾಲದ ಪ್ರಣಯ ಪಕ್ಷಿಗಳಾದ ಸಿಂಬು ಮತ್ತು ನಯನತಾರ ಪ್ರಸ್ತುತ "ಇದು ನಮ್ಮ ಆಳು" ಚಿತ್ರದ ಚಿತ್ರೀಕರಣದಲ್ಲಿ ತೊಡಗಿದ್ದು, ಚಿತ್ರದ ಚಿತ್ರೀಕರಣಕ್ಕೆ  ನಯನತಾರಾ ಹಾಜರಾಗದ ಹಿನ್ನಲೆಯಲ್ಲಿ ಚಿತ್ರದ ನಾಯಕ ನಟ ಸಿಂಬು ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.

ಪ್ರಸ್ತುತ ನಟ ಸಿಂಬು ಚಿತ್ರದ ನಾಯಕ ನಟಿಯಾಗಿರುವ ನಯನತಾರಾ ಚಿತ್ರದ ಚಿತ್ರೀಕರಣಕ್ಕೆ ಸಹಕರಿಸುತ್ತಿಲ್ಲ ಎಂದು ಆರೋಪಿಸಿ, ತಮಿಳು ಚಿತ್ರ ನಿರ್ಮಾಪಕರ ಸಂಘ ಮತ್ತು ದಕ್ಷಿಣ ಭಾರತದ  ಕಲಾವಿದರ ಸಂಘ (ನಡಿಗರ್ ಸಂಘಂ)ಕ್ಕೆ ದೂರು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಚಿತ್ರತಂಡ ಹೇಳುವಂತೆ "ಇದು ನಮ್ಮ ಆಳು" ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದ್ದು, ಕೇವಲ  ಒಂದು ಗೀತೆಯ ಚಿತ್ರೀಕರಣ ಮತ್ತು ಕೆಲ ಪ್ರಮುಖ ಸನ್ನಿವೇಶಗಳ ಚಿತ್ರೀಕರಣ ಮಾತ್ರ ಬಾಕಿ ಇದೆ. ಈ ಬಗ್ಗೆ ನಯನತಾರಾ ಅವರ ಬಳಿಯೂ ಚರ್ಚಿಸಲಾಗಿದ್ದು, ಆದರೆ ಅವರು ಮಾತ್ರ ಚಿತ್ರೀಕರಣಕ್ಕೆ  ಸಹಕರಿಸುತ್ತಿಲ್ಲ ಎಂದು ಹೇಳಲಾಗುತ್ತಿದೆ.

ಇನ್ನು ಈ ಬಗ್ಗೆ ನಟಿ ನಯನತಾರಾ ಅವರನ್ನು ಸ್ಪಷ್ಟನೆ ಕೇಳಲಾಗಿದ್ದು, ಇದಕ್ಕೆ ಉತ್ತರಿಸಿರುವ ನಟಿ ನಯನತಾರ ಚಿತ್ರದ ಚಿತ್ರೀಕರಣಕ್ಕೆ ತಾವು ನೀಡಿದ್ದ ಡೇಟ್ಸ್ ಗಳನ್ನು ಚಿತ್ರತಂಡ ಸಮರ್ಪಕವಾಗಿ  ಬಳಸಿಕೊಂಡಿಲ್ಲ. ಪ್ರಸ್ತುತ ನಾನು ನೀಡಿದ್ದ ಡೇಟ್ಸ್ ಮುಗಿದಿದ್ದು, ನಾನು ಈ ಮೊದಲೇ ಸಹಿ ಮಾಡಿದ್ದ ಇತರೆ ಚಿತ್ರಗಳಲ್ಲಿ ತೊಡಗಿಕೊಂಡಿದ್ದೇನೆ. ಹೀಗಾಗಿ ಮತ್ತೆ ಈ ಚಿತ್ರಕ್ಕಾಗಿ ಡೇಟ್ಸ್ ಗಳನ್ನು  ಹೊಂದಾಣಿಕೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಇದು ನಮ್ಮ ಆಳು ಚಿತ್ರವನ್ನು ಸಿಂಬು ಮಾಲೀಕತ್ವದ ಸಿಂಬು ಸಿನಿ ಆರ್ಟ್ಸ್ ಸಂಸ್ಥೆ ನಿರ್ಮಾಣ ಮಾಡುತ್ತಿದ್ದು, ಚಿತ್ರವನ್ನು ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ "ಪಸಂಗ" ಖ್ಯಾತಿಯ ಪಾಂಡಿರಾಜ್ ಅವರು  ನಿರ್ದೇಶಿಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com