ಸನ್ನಿ ಲಿಯೋನ್‍ಗೆ ಮಕ್ಕಳು ಬೇಕಂತೆ!

ಸನ್ನಿ ಲಿಯೋನ್ ತಾಯಿ ಆಗಲು ತುದಿಗಾಲಲ್ಲಿ ನಿಂತಿದ್ದಾಳೆ! ಹೀಗಂತ ಒಂದು ಸುದ್ದಿ ಹೊರಬಿದ್ರೆ ಎದೆ ಒಡೆದು ಶಾಕ್ ಆಗುವವರು ಎಷ್ಟು ಜನ? ಲೆಕ್ಕವಿಲ್ಲ.
ಸನ್ನಿ ಲಿಯೋನ್
ಸನ್ನಿ ಲಿಯೋನ್
Updated on: 

ಸನ್ನಿ ಲಿಯೋನ್ ತಾಯಿ ಆಗಲು ತುದಿಗಾಲಲ್ಲಿ ನಿಂತಿದ್ದಾಳೆ! ಹೀಗಂತ ಒಂದು ಸುದ್ದಿ ಹೊರಬಿದ್ರೆ ಎದೆ ಒಡೆದು ಶಾಕ್ ಆಗುವವರು ಎಷ್ಟು ಜನ? ಲೆಕ್ಕವಿಲ್ಲ.
ಆದ್ರೆ, ಅಂಥದ್ದೊಂದು ಕಾಲ ಶೀಘ್ರವೇ ಬರಲಿದೆ ಎಂದಿದ್ದಾಳೆ ಸನ್ನಿ ಲಿಯೋನ್! ಈ ವಿಚಾರಕ್ಕೆ ಗಂಡ ಡೇನಿಯಲ್ ವೆಬರ್ ಕೂಡ ಆಸಕ್ತಿ ತೋರಿದ್ದಾರಂತೆ. ಮೊನ್ನೆ ಸನ್ನಿ ಹೇಳಿದ್ದಿಷ್ಟು; `ನಾವಿಬ್ಬರೂ  ಮಗು ಹೊಂದಲು ನಿರ್ಧರಿಸಿದ್ದೇವೆ. ಅದಕ್ಕಾಗಿ ಸೂಕ್ತ ಸಂದರ್ಭಕ್ಕೆ ಕಾಯುತ್ತಿದ್ದೇವೆ. ಕಳೆದವಾರ ನಮ್ಮ ಅಜ್ಜಿ ಈ ವಿಚಾರದ ಬಗ್ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಅವರು ಆದಷ್ಟು ಬೇಗ  ಮೊಮ್ಮಗುವನ್ನು ಕಾಣಬೇಕಂತೆ. ಹೀಗಾಗಿ ನಾವು ತಡಮಾಡುವುದರಲ್ಲಿ ಅರ್ಥವಿಲ್ಲ'. `ಡೇನಿಯಲ್ ಅನ್ನು ಕೈಹಿಡಿದು ನಾಲ್ಕು ವರುಷವಾಯ್ತು. ಈ ಅವಧಿಯಲ್ಲಿ ಪ್ರತಿ ಕ್ಷಣವೂ ನನಗೆ ಖುಷಿ  ಕೊಟ್ಟಿದ್ದಾರೆ. ನನ್ನ ಬ್ಯುಸಿ ಚಟುವಟಿಕೆ ನಡುವೆ ಮಕ್ಕಳನ್ನು ಹೊಂದುವ ಬಗ್ಗೆ ಆಲೋಚಿಸಿಯೇ ಇಲ್ಲ. ನನ್ನೆಲ್ಲ ಆಸಕ್ತಿಗಳಿಗೆ ಬೆಂಬಲ ಕೊಟ್ಟಿರುವ ಡೇನಿಯಲ್‍ಗೂ ನಾನು ನಿರಾಶೆ ಮಾಡುವುದಿಲ್ಲ'  ಎಂದಿದ್ದಾಳೆ ಸನ್ನಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com