

ಬೆಂಗಳೂರು: ಸಿನೆಮಾ ಮಾಡಲು ಸಿದ್ಧ ಜಾಡು ಹಿಡಿಯದ ನಿರ್ದೇಶಕಿ ಹಂಸ ವಿಜೇತ್, ಆಧ್ಯಾತ್ಮಿಕ ವಿಷಯವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಹಿಂದೂಸ್ತಾನಿ ಸಂಗೀತಕಾರ ಪುಟ್ಟರಾಜ ಗವಾಯಿ ಅವರ ಜೀವನಾಧಾರಿತ 'ಶಿವಯೋಗಿ ಶ್ರೀ ಪುಟ್ಟಯ್ಯಜ್ಜ' ಸಿನೆಮಾ ಸಿದ್ಧವಾಗುತ್ತಿದೆ.
೨೦೦೮ರಲ್ಲಿ ಪದ್ಮಭೂಷಣ ಪಡೆದ ಪಂಡಿತ್ ಪುಟ್ಟರಾಜ್ ಗವಾಯಿ ಅವರಿಗೆ ಹುಟ್ಟಿನಿಂದಲೂ ಅಂಧರಾಗಿದ್ದರು. "ನನ್ನ ಮೊದಲ ಸಿನೆಮಾ ಭಕ್ತಿ ಪ್ರಧಾನವಾಗಿದ್ದ 'ಬನಶಂಕರಿ ಮಠ', ಇದು ನನಗೆ ಎರಡನೆಯದ್ದು. ಸಂಕ್ರಾಂತಿಗೆ ಬಿಡುಗಡೆಯಾಗಲಿದೆ" ಎನ್ನುತ್ತಾರೆ ಹಂಸ.
ಈ ಬಯೋಪಿಕ್ ನಲ್ಲಿ ಪಂಡಿತ್ ಪುಟ್ಟರಾಜ್ ಗವಾಯಿ ಪಾತ್ರವನ್ನು ವಿಜಯ್ ರಾಘವೇಂದ್ರ ನಿರ್ವಹಿಸುತ್ತಿದ್ದಾರೆ. ಗದಗ್ ನಲ್ಲಿ ಬಹುತೇಕ ಚಿತ್ರೀಕರಣವಾಗಿದೆ. "ಪುಟ್ಟರಾಜು ಅವರು ವಾಸವಿದ್ದ ಮಠ ಮತ್ತು ಅವರು ಜೀವಿಸಿದ ಬಾದಾಮಿ, ಐಹೊಳೆ ಮತ್ತು ಪಟ್ಟದಕಲ್ಲಿನಲ್ಲಿ ಕೂಡ ಚಿತ್ರೀಕರಣ ಮಾಡಿದ್ದೇವೆ" ಎಂದು ನಿರ್ದೇಶಕಿ ತಿಳಿಸಿದ್ದಾರೆ.
ಈ ಸಿನೆಮಾದಲ್ಲಿನ ವಿಜಯ್ ನಟನೆಯ ಬಗ್ಗೆ ಪ್ರಶಂಸೆಯ ಸುರಿಮಳೆ ಸುರಿಸುವ ಹಂಸ "ವಿಜಯ್ ನಟನೆಯಲ್ಲಿ ಗವಾಯಿಗಳು ಎದ್ದು ಬರುವಂತಿದೆ" ಎನ್ನುತ್ತಾರೆ.