ಬಾಲಕೃಷ್ಣ ನಟನೆಯ ೯೯ನೆ ಸಿನೆಮಾ ಶೀರ್ಷಿಕೆ "ಡಿಕ್ಟೇಟರ್"

ನಟ ನಂದಮೂರಿ ಬಾಲಕೃಷ್ಣ ಅವರ ೯೯ನೆ ತೆಲುಗು ಸಿನೆಮಾದ ಹೆಸರು "ಡಿಕ್ಟೇಟರ್".
ನಂದಮೂರಿ ಬಾಲಕೃಷ್ಣ
ನಂದಮೂರಿ ಬಾಲಕೃಷ್ಣ

ಚೆನ್ನೈ: ನಟ ನಂದಮೂರಿ ಬಾಲಕೃಷ್ಣ ಅವರ ೯೯ನೆ ತೆಲುಗು ಸಿನೆಮಾದ ಹೆಸರು "ಡಿಕ್ಟೇಟರ್". ಚಿತ್ರೀಕರಣ ಶೀಘ್ರದಲ್ಲೆ ಪ್ರಾರಂಭವಾಗಲಿದ್ದು ಅಕ್ಟೋಬರ್ ದಸರಾ ಹಬ್ಬದ ಹೊತ್ತಿಗೆ ಬಿಡುಗಡೆ ಕಾಣಲಿದೆ ಎಂದಿದ್ದಾರೆ ನಿರ್ಮಾಪಕರು.

"ದಸರಾ ಹೊತ್ತಿಗೆ ಚಲನಚಿತ್ರ ಬಿಡುಗಡೆ ಮಾಡುವ ಯೋಜನೆಯಿದೆ. ನಯನತಾರ ಬಾಲಕೃಷ್ಣ ಅವರೊಂದಿಗೆ ನಟಿಸಲಿದ್ದಾರೆ ಹಾಗೂ ಶ್ರೀವಾಸ್ ಸಿನೆಮಾ ನಿರ್ದೇಶಿಸಲಿದ್ದಾರೆ. ಹೈದರಾಬಾದ್, ದೆಹಲಿ ಮತ್ತು ಯೂರೋಪಿನಲ್ಲಿ ೪೦ ಕೋಟಿ ಬಜೆಟ್ಟಿನಲ್ಲಿ ಸಿನೆಮಾ ಚಿತ್ರೀಕರಣಗೊಳ್ಳಲಿದೆ" ಎಂದು ಸಿನೆಮಾಗೆ ಸಂಬಂಧಿಸಿದವರೊಬ್ಬರು ಸಿಳಿಸಿದ್ದಾರೆ.

'ಸಿಂಹ' ಮತ್ತು 'ಶ್ರೀ ರಾಮರಾಜ್ಯಂ' ನಂತರ ಇದು ಮೂರನೆಯ ಬಾರಿಗೆ ನಯನತಾರಾ ಮತ್ತು ಬಾಲಕೃಷ್ಣ ಒಟ್ಟಿಗೆ ನಟಿಸುತ್ತಿರುವುದು.

'ಲಕ್ಷ್ಯಂ' ಮತ್ತು 'ಲೌಖ್ಯಂ' ಎಂಬ ಎರಡು ಸೂಪರ್ ಹಿಟ್ ಸಿನೆಮಾಗಳನ್ನು ನೀಡಿರುವ ಶ್ರೀವಾಸ್ ಹ್ಯಾಟ್ರಿಕ್ ಮೇಲೆ ಕಣ್ಣಿಟ್ಟಿದ್ದಾರೆ.

ಏರೋಸ್ ಇಂಟರ್ನ್ಯಾಷನಲ್ ಇದನ್ನು ನಿರ್ಮಿಸುತ್ತಿದ್ದು ಎಸ್ ಎಸ್ ತಮನ್ ಸಂಗೀತ ನೀಡಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com