ಅಳಿಯ ಅಲ್ಲ ಆಲಿಯಾ!

ಇಂದ್ರಜಿತ್ ಲಂಕೇಶ್ ನಿರ್ದೇಶನದ ರವಿಚಂದ್ರನ್ ಅಭಿನಯದ ಹೊಸ ಚಿತ್ರ ಲವ್ ಯೂ ಆಲಿಯಾ ಶೀರ್ಷಿಕೆ...
ಅಳಿಯ ಅಲ್ಲ ಆಲಿಯಾ!
Updated on

ಇಂದ್ರಜಿತ್ ಲಂಕೇಶ್ ನಿರ್ದೇಶನದ ರವಿಚಂದ್ರನ್ ಅಭಿನಯದ ಹೊಸ ಚಿತ್ರ ಲವ್ ಯೂ ಆಲಿಯಾ ಶೀರ್ಷಿಕೆ ಸೃಷ್ಟಿಸಿದ್ದ ಗೊಂದಲಕ್ಕೆ ಸ್ವತಃ ಇಂದ್ರಜಿತ್ ತೆರೆ ಎಳೆದಿದ್ದಾರೆ.

ಇದೆಲ್ಲ ಸೃಷ್ಟಿಯಾಗಿದ್ದು ಶೀರ್ಷಿಕೆಯನ್ನು ಇಂಗ್ಲೀಷಲ್ಲಿ ಬರೆದು ಕನ್ನಡದಲ್ಲಿ ಅರ್ಥ ಮಾಡಿಕೊಂಡಿದ್ದರಿಂದ  ಆಲಿಯಾ ಎಂದು ಬರೆದದ್ದನ್ನು ಇಂಗ್ಲೀಷಲ್ಲಿ ಅಳಿಯ ಎಂದು ಓದಿಕೊಂಡು, ಇಂದ್ರಜಿತ್ ಯಾಕೆ ಈ ಥರ ಅಳಿಯ, ಮಾವ, ಸೊಸೆ ಎಂಬ ಶೀರ್ಷಿಕೆಯ ಸಿನಿಮಾ ನಿರ್ದೇಶಿಸುತ್ತಿದ್ದಾರೆ ಎಂಬ ಚರ್ಚೆ ಆರಂಭವಾಗಿದೆ. ಈ ಗೊಂದಲ ನಿವಾರಿಸಲು ಮುಂದಾದ ಇಂದ್ರಜಿತ್ ಮೊದಲು ಮಾಡಿದ ಕೆಲಸ ಲವ್ ಯೂ ಅಳಿಯ ಎಂಬ ಟೈಟಲನ್ನು ಛೇಂಬರಿನಲ್ಲಿ ರಿಜಿಸ್ಟರ್ ಮಾಡಿದ್ದು! ತಾವೇನೋ ಇದು ಅಳಿಯ ಅಲ್ಲ ಆಲಿಯಾ ಎಂದು ಮಾತಲ್ಲಿ ಹೇಳಿ ಅನುಮಾನ ನಿವಾರಿಸಬಹುದು. ಆದರೆ ಗಾಂಧಿನಗರದ ಟೈಟಲನ್ನು ಬ್ಯುಸಿನೆಸ್‍ಮನ್‍ಗಳು ಲವ್ ಯೂ ಅಳಿಯಾಎಂಬ ಟೈಟಲನ್ನು ರಿಜಿಸ್ಟರ್ ಮಾಡಿಕೊಂಡು ತಮ್ಮ ಸಿನಿಮಾ ರಿಲೀಸಾಗುವ ಹೊತ್ತಿನಲ್ಲಿ ಪ್ರೇಕ್ಷಕರಿಗೆ ಕನ್ ಫ್ಯೂಸ್ ಮಾಡಿದರೆ ಗತಿಯೇನು ಎಂಬ ಮುಂಜಾಗ್ರತೆಯಲ್ಲಿ ಇಂದ್ರಜಿತ್ ಈ ಜಾಣ್ಮೆ ಉಪಯೋಗಿಸಿದ್ದಾರೆ.

ಮುಂದೇನಾದರೂ ಆ ಟೈಟಲಿನಲ್ಲಿ ಸಿನಿಮಾ ಮಾಡೋ ಆಲೋಚನೆ ಇದೆಯಾ ಎಂಬ ಪ್ರಶ್ನೆಗೆ ನಗುನಗುತ್ತಲೇ ನಿರಾಕರಣೆಯ ಉತ್ತರ ನೀಡುವ ಇಂದ್ರಜಿತ್, ಪತ್ರಕರ್ತರೇ ಯಾರಾದ್ರೂ ಆ ಹೆಸರಿನಲ್ಲಿ ಸಿನಿಮಾ ಮಾಡೋದಾದ್ರೆ ಫ್ರೀಯಾಗಿ ಟೈಟಲ್  ಕೊಡೋದಾಗಿ ಹೇಳುತ್ತಾರೆ. ಅಂದ ಹಾಗೆ ಚಿತ್ರೀಕರಣ ಮುಕ್ತಾಯ ಮಾಡಿ ಈಗ ಮೆಲ್ಲನೆ ಪ್ರಚಾರ ಶುರು ಮಾಡಿರುವ ಇಂದ್ರಜಿತ್, ಹೊಸ ಪೋಸ್ಟರೊಂದನ್ನು ಬಿಡುಗಡೆ ಮಾಡಿದ್ದಾರೆ. ಪೋಸ್ಟರಿನಲ್ಲಿ ಸುಂದರಿಯೊಬ್ಬಳು ಮಲಗಿ ಪೋಸ್ ಕೊಡುತ್ತಿದ್ದಾಳೆ. ಆದರೆ ಆಕೆ ಯಾರೆಂಬುದು ಮಾತ್ರ ನಿಂತು ಕೂತು ಮಲಗಿ ನೋಡಿದರೂ ಗೊತ್ತಾಗುತ್ತಿಲ್ಲ. ಇಂದ್ರಜಿತ್ ರನ್ನೇ ಆ ಪ್ರಶ್ನೆ ಕೇಳಿದರೂ ಮುಂದಿನ ಪ್ರೆಸ್ ಮೀಟ್ ತನಕ ಅದು ಸಸ್ಪೆನ್ಸ್ ಎಂದು ಮುಗುಳ್ನಗುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com