ಸಮಂತಾ
ಸಮಂತಾ

ಸಮಂತಾ ಟಿಕ್ ನಹೀ...

'ಈಗ' ಚಿತ್ರದ ನಾಯಕಿ ಸಮಂತಾಳನ್ನು ಆಗ ಸುದೀಪ್ ಮಾತ್ರ ಫಾಲೋ ಮಾಡ್ತಿದ್ದ. ಆದರೆ ಈಗ ಲಕ್ಷಾಂತರ...

ರಾಜಮೌಳಿಯ 'ಈಗ' ಚಿತ್ರದ ನಾಯಕಿ ಸಮಂತಾಳನ್ನು ಆಗ ಸುದೀಪ್ ಮಾತ್ರ ಫಾಲೋ ಮಾಡ್ತಿದ್ದ. ಆದರೆ ಈಗ ಲಕ್ಷಾಂತರ ಜನ ಫಾಲೋ ಮಾಡ್ತಿದಾರೆ.

ಹೌದು ಟ್ವಿಟರ್‌ನಲ್ಲಿ ಈ ಸ್ವೀಟೀಯನ್ನು ಹತ್ತು ಲಕ್ಷ ಅಭಿಮಾನಿಗಳು ನೊಣ ಮುತ್ತಿಕೊಂಡಂತೆ ಮುತ್ತಿಕೊಂಡಿದ್ದಾರೆ. ಆದರೆ ಹತ್ತು ಲಕ್ಷ ಫಾಲೋವರ್ಸ್ ಹೊಂದಿದ್ದರೂ ಸಮಂತಾಳ ಟ್ವಿಟರ್ ಅಕೌಂಟನ್ನು ಇನ್ನೂ ಸೆಲೆಬ್ರಿಟಿ ಅಕೌಂಟ್ ಎಂದು ಗುರಿತಿಸಲಿಲ್ಲವಂತೆ. ಟ್ವಿಟರ್ ಸಂಪ್ರದಾಯದ ಪ್ರಕಾರ ಯಾವುದೇ ಸೆಲೆಬ್ರಿಟಿಗಳು ಟ್ವಿಟರ್ ಖಾತೆ ತೆರೆದರೂ ಅದು ನಿಜವೋ ಸುಳ್ಳೋ ಎಂಬ ತನಿಖೆ ನಡೆಸಿ, ನಿಜ ಎಂದು ಗೊತ್ತಾದಾಗ ಅವರ ಅಕೌಂಟಿಗೊಂದು ನೀಲಿಚಿಹ್ನೆ ನೀಡಲಾಗುತ್ತದೆ.

ಬಹುತೇಕ ಎಲ್ಲ ತಾರೆಗಳ ಟ್ವಿಟರ್ ಅಕೌಂಟಿಗೂ ಈ ಬ್ಲೂಟಿಕ್ ಬಂದಾಗಿದೆ. ಆದರೆ ಸಮಂತಾ ಅಕೌಂಟ್ ಮಾತ್ರ ಹಾಗೆಯೇ ಇದೆ. ಹಲವರಿಗೆ ಇದು ನಕಲಿ ಖಾತೆಯ ಎಂಬ ಅನುಮಾನವೂ ಬಂದಿದೆಯಾದರೂ ಅದರಲ್ಲಿನ ಮಾತುಕತೆ ಫೋಟೊ ನೋಡಿದಾಗ ಅದು ನಿಜ ಎಂಬ ಅರಿವಾಗಿದೆ.

ವಿಷಯ ಇಷ್ಯೆ. ಟ್ವಿಟರ್ ಅಧಿಕಾರಿಗಳು ಈ ಬಗ್ಗೆ ಪರಿಶೀಲಿಸಲು ಬಂದಾಗ ಸಮಂತಾ ಲಭ್ಯವಿರಲಿಲ್ಲ. ಆ ನಂತರ ಸಮಂತಾ ತಮ್ಮ ಖಾತೆಯನ್ನು ನಿಷ್ಕ್ರಿಯಗೊಳಿಸಿ ಮತ್ತೆ ಹೊಸ ಖಾತೆ ತೆರೆದಿದ್ದಾರೆ. ಹಾಗಾಗಿ ಟ್ವಿಟರ್ ಆ ಖಾತೆಯ ಬಗ್ಗೆ ಕೊಂಚ ನಿರ್ಲಕ್ಷ್ಯವಹಿಸಿದೆ. ಬ್ಲೂಟಿಕ್ ಇಲ್ಲದೇ ಸಮಂತಾ ಟ್ವಿಟರ್‌ನಲ್ಲಿ ಸೆಲೆಬ್ರಿಟಿ ಪಟ್ಟ ಕಳೆದುಕೊಂಡಿದ್ದಾಳೆ.

Related Stories

No stories found.

Advertisement

X
Kannada Prabha
www.kannadaprabha.com