

ಬೆಂಗಳೂರು: ಅನೂಪ್ ಭಂಡಾರಿ ಅವರ 'ರಂಗಿತರಂಗ' ಈ ಶುಕ್ರವಾರ ಬಿಡುಗಡೆಯಗಲಿದ್ದು, ಬಿಡುಗಡೆಗೆ ಮುಂಚೆಯೇ ಹಲವರ ಪ್ರಶಂಸೆಗೆ ಕಾರಣವಾಗಿದೆ. ಈ ಹಿಂದೆ ಯಾರೂ ಪ್ರಯತ್ನಿಸಿದ ಜಲಾಂತರ ಆಕ್ಷನ್ ಫೈಟ್ ದೃಶ್ಯಗಳನ್ನು ಚಿತ್ರೀಕರಿಸಿರುವುದಾಗಿ ಹೇಳಿಕೊಂಡಿದ್ದಾರೆ ನಿರ್ದೇಶಕ ಅನೂಪ್. ಈ ಹೊಡೆದಾಟದ ದೃಶ್ಯವನ್ನು ಚಿತ್ರೀಕರಿಸಲು ೮ ಘಂಟೆಗಳ ಕಾಲ ತೆಗೆದುಕೊಂಡರೂ ಚಿತ್ರದಲ್ಲಿ ಈ ದೃಶ್ಯ ಇರುವುದು ಒಂದುವರೆ ನಿಮಿಷವಂತೆ.
"ಈ ದೃಶ್ಯಾವಳಿ ನಾಯಕ ನಟ ನಿರುಪ್ ಭಂಡಾರಿ ಮತ್ತು ಖಳನಟ ಚೇತನ್ ರಾಜ್ ನಡುವೆ ನಡೆಯುವಂತದ್ದು. ಪುತ್ತೂರಿನಲ್ಲಿ ಹರಿಯುವ ನೀರಿನಡಿ ಈ ದೃಶ್ಯ ಚಿತ್ರೀಕರಿಸಿದ್ದೇವೆ. ಸಿನೆಮ್ಯಾಟೋಗ್ರಾಫರ್ ಲ್ಯಾನ್ಸ್ ಕಪ್ಲಾನ್ ಇದ್ದರೂ ಕೂಡ ಮತ್ತೊಬ್ಬ ಸಿನೆಮ್ಯಾಟೋಗ್ರಾಫರ್ ವಿಲ್ಲಿಯಮ್ ಡೇವಿಡ್ ಅವರು ಆಮ್ಲಜನಕ ಮುಖವಾಡ ಧರಿಸದೆ ಚಿತ್ರೀಕರಣ ಮಾಡಿದರು. ನಟರು ಕೂಡ ಬೇರೆ ಯಾವುದೇ ಸಹಾಯ ಇಲ್ಲದ್ದೆ ಉಸಿರು ಕಟ್ಟಿ ನೀರಿನಡಿ ನಟಿಸಿದರು" ಎನ್ನುತ್ತಾರೆ ನಿರ್ದೇಶಕ.
ನಿರ್ಮಾಪಕರಿಗೆ ಹೊರೆಯಾಗಬಾರದೆಂದು ಅತಿ ಸ್ವಾಭಾವಿಕವಾಗಿ ಇದನ್ನು ಚಿತ್ರೀಕರಿಸಿದ್ದಾರಂತೆ. "ಹಿನ್ನಲೆ ಸಂಗೀತದೊಂದಿಗೆ, ನೀರಿನಡಿ ನಟರ ಧ್ವನಿಯನ್ನು ಉಳಿಸಿಕೊಂಡಿದ್ದೇವೆ" ಎನ್ನುತ್ತಾರೆ ಅನೂಪ್.