ಚಲನಚಿತ್ರ ವಾಣಿಜ್ಯ ಮಂಡಳಿಗೆ ದಂಡ

ಸಿನೆಮಾ ಮತ್ತು ಟಿವಿ ಧಾರಾವಾಹಿಗಳ ಡಬ್ಬಿಂಗ್ ಅನ್ನು ತಡೆ ಹಿಡಿದಿದ್ದಕ್ಕೆ ಸಂಬಂಧಿಸಿದಂತೆ ಭಾರತೀಯ ಸ್ಪರ್ಧಾತ್ಮಕ ಆಯೋಗವು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಕರ್ನಾಟಕ ಟಿಲಿವಿಷನ್ ಅಸೋಸಿಯೇಷ ನ್ ಹಾಗೂ ಕರ್ನಾಟಕ ಚಲನಚಿತ್ರ ನಿರ್ಮಾಕರ...
ಭಾರತೀಯ ಸ್ಪರ್ಧಾತ್ಮಕ ಆಯೋಗ
ಭಾರತೀಯ ಸ್ಪರ್ಧಾತ್ಮಕ ಆಯೋಗ

ಬೆಂಗಳೂರು: ಸಿನೆಮಾ ಮತ್ತು ಟಿವಿ ಧಾರಾವಾಹಿಗಳ ಡಬ್ಬಿಂಗ್ ಅನ್ನು ತಡೆ ಹಿಡಿದಿದ್ದಕ್ಕೆ ಸಂಬಂಧಿಸಿದಂತೆ ಭಾರತೀಯ ಸ್ಪರ್ಧಾತ್ಮಕ ಆಯೋಗವು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಕರ್ನಾಟಕ ಟಿಲಿವಿಷನ್ ಅಸೋಸಿಯೇಷ ನ್ ಹಾಗೂ ಕರ್ನಾಟಕ ಚಲನಚಿತ್ರ ನಿರ್ಮಾಕರ ಸಂಘಗಳಿಗೆ ಆದಾಯವಾರು ದಂಡ ವಿಧಿಸಿದೆ. ಆ ಮೂಲಕ ರಾಜ್ಯದಲ್ಲಿ ಎದ್ದಿರುವ ಡಬ್ಬಿಂಗ್ ಪರ ಮತ್ತು ವಿರೋಧಕ್ಕೆ ಹೊಸ ತಿರುವು ಸಿಕ್ಕಿದೆ.

ಸಿಸಿಐನ ಕಾಯ್ದೆ 3ರ ಪ್ರಕಾರ ರಾಜ್ಯದಲ್ಲಿ ಡಬ್ಬಿಂಗ್ ವಿರೋಧ ವ್ಯಕ್ತಪಡಿಸಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಶೇ.10ರ ಆದಾಯದಂತೆ ರು.16,82,204 ದಂಡ ವಿಧಿಸಿದ್ದು, ಕರ್ನಾಟಕ ಟಿವಿಲಿಷನ್ ಅಸೋಸಿಯೇಷನ್ ಹಾಗೂ ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘಕ್ಕೆ ಶೇ.8ರ ಆದಾಯದಂತೆ ಎರಡು ಸಂಸ್ಥೆಗಳಿಗೆ ಒಟ್ಟು ರು.3.5 ಲಕ್ಷ ದಂಡ ಹಾಕಲಾಗಿದೆ. ಆ ಮೂಲಕ ಕಳೆದ ಐವತ್ತು ವರ್ಷಗಳಿಂದ ರಾಜ್ಯದ ಗಡಿ ಆಚೆಗೆ ಇರುವ ಡಬ್ಬಿಂಗ್ ಭೂತಕ್ಕೆ ಜೀವ ಬಂದಂತಾಗಿದೆ. ಜತೆಗೆ ಡಬ್ಬಿಂಗ್ ಪರ ವಾದ ಮಾಡುತ್ತಿದ್ದವರಿಗೆ ಕಾನೂನಿನ ಬೆಂಬಲ ಸಿಕ್ಕಿದೆ. ಸಿಸಿಐನಿಂದ ದಂಡ ವಿಧಿಸಿಕೊಂಡಿರುವ ಸಂಸ್ಥೆಗಳು ಮುಂದಿನ ಕಾನೂನು ಹೋರಾಟಕ್ಕೆ ರುಪುರೇಷೆ ಮಾಡಿಕೊಳ್ಳುತ್ತಿದ್ದು, ಹಿರಿಯರ ಮಾತಿನಂತೆ ಚಿತ್ರೋದ್ಯಮದಲ್ಲಿ ಡಬ್ಬಿಂಗ್ ಪ್ರವೇಶಕ್ಕೆ ಅನುಮತಿ ನೀಡದಿದ್ದವರ ಮುಂದಿನ ನಡೆ ಏನು? ಎಂಬ ಪ್ರಶ್ನೆ ಎದುರಾಗಿದೆ.

ಚಿತ್ರೋದ್ಯಮ ಎನ್ನುವ ಮನೆಯ ಸಮಸ್ಯೆಯನ್ನು ಕಾನೂನಿನ ಕಟೆಕಟೆಯಲ್ಲಿ ನಿಲ್ಲಿಸಿದ್ದು, ಮನೆ ಸಮಸ್ಯೆ ಕೋರ್ಟ್ ಸೂಚನೆಯಂತೆ ಬಗೆಹರಿಯಬಹುದೋ? ಅಥವಾ ಮನೆಯ ಸದಸ್ಯರ ನಡುವೆ ಮಾತುಕತೆ ಮೂಲಕ ಸಮಸ್ಯೆಗೆ ಪರಿಹಾರ ಸಿಗಬಹುದೋ ಎನ್ನುವುದನ್ನು ಕಾದು ನೋಡಬೇಕಿದೆ.

ಸುಪ್ರೀಂನಂತೆ ಪರಿಹಾರ
ನಗರದ ಕೆ.ಪಿ. ಅಗ್ರಹಾರದಲ್ಲಿ ಒಳಚರಂಡಿ ಶುದ್ಧೀಕರಣ ಸಂದರ್ಭದಲ್ಲಿ ಸಾವನ್ನಪ್ಪಿದ ಸಫಾಯಿ ಕರ್ಮಚಾರಿಗೆ ಸುಪ್ರೀಂ ಕೋರ್ಟ್ ಮಾರ್ಗಸೂಚಿ ಅನ್ವಯ ಪರಿಹಾರ ನೀಡುವ ಕುರಿತು ಸರ್ಕಾರ ಕ್ರಮ ತೆಗೆದುಕೊಳ್ಳುವಂತೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ. ಮೃತ ಚನ್ನಯ್ಯರ ಪತ್ನಿ ಚನ್ನಮ್ಮ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್. ಬೋಪಣ್ಣ ಅವರಿದ್ದ ನ್ಯಾಯಪೀಠ, ಪ್ರಕರಣಕ್ಕೆ ಸಂಬಂಧ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ಬಿಬಿಎಂಪಿ ಹಾಗೂ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಅಲ್ಲದೆ, ಸುಪ್ರೀಂಕೋರ್ಟ್ ಮಾರ್ಗಸೂಚಿಯಂತೆ ಎಷ್ಟು ಪ್ರಮಾಣದ ಪರಿಹಾರ ನೀಡಬಹುದು ಎಂಬುದನ್ನು ತಿಳಿಸುವಂತೆಯೂ ಸೂಚಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com