ಮನೆ ಬಾಡಿಗೆ ಕೊಡದ 'ಕಿರಾತಕ' ಯಶ್ ವಿರುದ್ಧ ದೂರು

ಮನೆ ಬಾಡಿಗೆ ನೀಡದೆ, ಮನೆ ಮಾಲೀಕನಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ 'ಕಿರಾತಕ' ಚಿತ್ರದ ನಾಯಕ ನಟ, ರಾಕಿಂಗ್ ಸ್ಟಾರ್ ಯಶ್ ವಿರುದ್ಧ ದೂರು...
ಯಶ್
ಯಶ್

ಬೆಂಗಳೂರು: ಮನೆ ಬಾಡಿಗೆ ನೀಡದೆ, ಮನೆ ಮಾಲೀಕನಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ 'ಕಿರಾತಕ' ಚಿತ್ರದ ನಾಯಕ ನಟ, ರಾಕಿಂಗ್ ಸ್ಟಾರ್ ಯಶ್ ವಿರುದ್ಧ ದೂರು ದಾಖಲಿಸಲಾಗಿದೆ.

ಯಶ್ ಅವರು ಕಳೆದ ಒಂದು ವರ್ಷದಿಂದ ಕತ್ರಿಗುಪ್ಪೆಯಲ್ಲಿರುವ ತಾವು ವಾಸಿಸುವ ಮನೆಯ ಬಾಡಿಗೆ ನೀಡಿಲ್ಲ ಮತ್ತು ಬಾಡಿಗೆ ಕೇಳಿದರೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿ  ಮನೆ ಮಾಲೀಕ ಡಾ.ಎಂ. ಮುನಿಪ್ರಸಾದ್ ಅವರು ಯಶ್ ಹಾಗೂ ಅವರ ತಾಯಿ ಪುಷ್ಪ ವಿರುದ್ಧ ಗಿರಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮುನಿಪ್ರಸಾದ್ ಅವರು ಕಳೆದ ಮಾರ್ಚ್ 20ರಂದೇ ಯಶ್ ಹಾಗೂ ಅವರ ತಾಯಿ ವಿರುದ್ಧ ದೂರು ನೀಡಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com