ಮಾಸ್ಟರ್ ಆನಂದ್ ಡಾನ್ಸಿಂಗ್ ಸ್ಟಾರ್-2 ವಿಜೇತ

ಡಾನ್ಸಿಂಗ್ ಸ್ಟಾರ್-2 ಆವೃತ್ತಿಯ ವಿಜೇತರು ಯಾರು ಎಂಬ ಕುತೂಹಲಕ್ಕೆ ತೆರೆಬಿದ್ದಿದ್ದು 15 ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿ ಮಾಸ್ಟರ್ ಆನಂದ್ ಡಾನ್ಸಿಂಗ್ ಸ್ಟಾರ್ ಪಟ್ಟ ಪಡೆದಿದ್ದಾರೆ.
ಡಾನ್ಸಿಂಗ್ ಸ್ಟಾರ್-2 ಕಾರ್ಯಕ್ರಮದಲ್ಲಿ  ಮಾಸ್ಟರ್ ಆನಂದ್(ಸಾಂದರ್ಭಿಕ ಚಿತ್ರ )
ಡಾನ್ಸಿಂಗ್ ಸ್ಟಾರ್-2 ಕಾರ್ಯಕ್ರಮದಲ್ಲಿ ಮಾಸ್ಟರ್ ಆನಂದ್(ಸಾಂದರ್ಭಿಕ ಚಿತ್ರ )

ಡಾನ್ಸಿಂಗ್ ಸ್ಟಾರ್-2 ಆವೃತ್ತಿಯ ವಿಜೇತರು ಯಾರು ಎಂಬ ಕುತೂಹಲಕ್ಕೆ ತೆರೆಬಿದ್ದಿದ್ದು 15 ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿ ಮಾಸ್ಟರ್ ಆನಂದ್ ಡಾನ್ಸಿಂಗ್ ಸ್ಟಾರ್ ಪಟ್ಟ ಪಡೆದಿದ್ದಾರೆ.

ಮಾಸ್ಟರ್ ಆನಂದ್ ಗೆ 10 ಲಕ್ಷ ರೂಪಾಯಿ ನಗದು ಬಹುಮಾನ ಹಾಗೂ ಡಾನ್ಸಿಂಗ್ ಸ್ಟಾರ್-2 ಆವೃತ್ತಿಯ ಟ್ರೋಫಿ ನೀಡಲಾಗಿದೆ.  ಇನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಸೋಮವಾರ ಡಾನ್ಸಿಂಗ್ ಸ್ಟಾರ್-2 ರ ಫೈನಲ್ ಕಾರ್ಯಕ್ರಮ ನಡೆದಿದ್ದು ಬರುವ ಭಾನುವಾರ ಕಿರುತೆರೆಯಲ್ಲಿ ಪ್ರಸಾರವಾಗಲಿದೆ.

ರಿಯಾಲಿಟಿ ಶೋ ನಲ್ಲಿ ವಿಜೇತರಾಗಿರುವ ಬಗ್ಗೆ ಪ್ರತಿಕ್ರಿಯಿಸಿರುವ ಮಾಸ್ಟರ್ ಆನಂದ್, ಪರಿಶ್ರಮ ಹಾಗೂ ಕಾರ್ಯತಂತ್ರ ಎಂದಿಗೂ ಸೋಲನ್ನುಂಟು ಮಾಡುವುದಿಲ್ಲ ಎಂಬುದಕ್ಕೆ ಈ ಗೆಲುವೇ ಸಾಕ್ಷಿ ಎಂದು ಹೇಳಿದ್ದಾರೆ.  ಡಾನ್ಸಿಂಗ್ ಸ್ಟಾರ್ ನಲ್ಲಿ ಪರಿಕಲ್ಪನೆಗಳು ಪ್ರಾಮುಖ್ಯತೆ ಪಡೆಯಲಿವೆ. ಆದ್ದರಿಂದ ಪರಿಕಲ್ಪನೆಗಳ ಬಗ್ಗೆ ಸಾಕಷ್ಟು ಗಮನಹರಿಸಿದೆ. ಈ ಯಶಸ್ಸಿನ ಕೀರ್ತಿ ನೃತ್ಯ ನಿರ್ದೇಶಕ ಪವನ್ ಹಾಗೂ ಸಹ ನೃತ್ಯಗಾರ್ತಿ ಸುಶ್ಮಿತಾ ಗೆ ಸಲ್ಲಬೇಕು ಎಂದು  ಆನಂದ್ ಹೇಳಿದ್ದಾರೆ.

ಸದ್ಯದಲ್ಲೇ ಡಾನ್ಸಿಂಗ್ ಸ್ಟಾರ್ ಜೂನಿಯರ್ ಶೋ ಪ್ರಾರಂಭವಾಗಲಿದ್ದು, ಇದರಲ್ಲಿ ಭಾಗವಹಿಸುವ ಮಕ್ಕಳಿಗೆ ಮಾರ್ಗದರ್ಶನ ನೀಡುವುದಾಗಿ ಮಾಸ್ಟರ್ ಆನಂದ ಹೇಳಿದ್ದಾರೆ. ಕಾರ್ಯಮ್ರಮವೊಂದರಲ್ಲಿ ತಮಗೆ ತಿಳಿಯದ ನೃತ್ಯ ಪ್ರಕಾರವನ್ನು ಪ್ರದರ್ಶಿಸಿದಾಗ ಆ ನೃತ್ಯ ಪ್ರಕಾರದ ಬಗ್ಗೆ ತಿಳಿದಿಲ್ಲ, ಆದ್ದರಿಂದ ಮಯೂರಿ ಅವರಿಗೆ ತೀರ್ಪು ನೀಡುವಂತೆ ಹೇಳಿದ್ದರು ರವಿಚಂದ್ರನ್. ಅವರ ಈ ನಮ್ರತೆಯ ಸ್ವಭಾವವನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಆನಂದ್ ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com