ಟಾಮ್ ಹಾಲೆಂಡ್ ನೂತನ ಸ್ಪೈಡರ್ ಮ್ಯಾನ್

ವ್ಯಾಪಕ ಶೋಧನೆಯ ನಂತರ ಸೂಪರ್ ಹೀರೋ ಸ್ಪೈಡರ್ ಮ್ಯಾನ್ ಪಾತ್ರಕ್ಕೆ ಟಾಮ್ ಹಾಲೆಂಡ್ ಅವರು ಆಯ್ಕೆಯಾಗಿದ್ದಾರೆ ಎಂದು ಮಾರ್ವೆಲ್ ಸ್ಟುಡಿಯೋಸ್
ಸ್ಪೈಡರ್ ಮ್ಯಾನ್ ಚಿತ್ರದ ಒಂದು ದೃಶ್ಯ
ಸ್ಪೈಡರ್ ಮ್ಯಾನ್ ಚಿತ್ರದ ಒಂದು ದೃಶ್ಯ

ಲಾಸ್ ಎಂಜಲೀಸ್: ವ್ಯಾಪಕ ಶೋಧನೆಯ ನಂತರ ಸೂಪರ್ ಹೀರೋ ಸ್ಪೈಡರ್ ಮ್ಯಾನ್ ಪಾತ್ರಕ್ಕೆ ಟಾಮ್ ಹಾಲೆಂಡ್ ಅವರು ಆಯ್ಕೆಯಾಗಿದ್ದಾರೆ ಎಂದು ಮಾರ್ವೆಲ್ ಸ್ಟುಡಿಯೋಸ್ ಮತ್ತು ಸೋನಿ ಪಿಕ್ಚರ್ಸ್ ಘೋಷಿಸಿದೆ.

ಹಾಲೆಂಡ್ ಅವರ ಮೊದಲ ಚಿತ್ರ ಪೀಟರ್ ಪಾರ್ಕರ್. ನೂತನ ಸ್ಪೈಡರ್ ಮ್ಯಾನ್ ಜುಲೈ ೨೮ ೨೦೧೭ಕ್ಕೆ ಚಿತ್ರಮಂದಿರಗಳಿಗೆ ಲಗ್ಗೆ ಇಡಲಿದೆ ಎಂದು ಇಆನ್ಲೈನ್.ಕಾಂ ವರದಿ ಮಾಡಿದೆ. ಈ ಚಿತ್ರವನ್ನು ಜಾನ್ ವ್ಯಾಟ್ಸ್ ನಿರ್ದೇಶಿಸಲಿದ್ದಾರೆ.

ಸ್ಪೈಡರ್ ಮ್ಯಾನ್ ಪಾತ್ರಕ್ಕೆ ನಟ ಆಂಡ್ರಿ ಗಾರ್ಫೀಲ್ಡ್ ಅವರ ಹೆಸರೂ ಕೂಡ ಕೇಳಿ ಬಂದಿತ್ತು.

ಸದ್ಯಕ್ಕೆ ಹಾಲೆಂಡ್ ಅವರಿಗೆ ನಟಿಸಲು ಹಲವಾರು ಸಿನೆಮಾಗಳು ಸಾಲಿನಲ್ಲಿವೆ. ಇದರಲ್ಲಿ 'ಇನ್ ದ ಹಾರ್ಟ್ ಆಫ್ ದ ಸೀ' ಕೂಡ ಒಂದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com