ನಾಟಿ 'ಕೋಳಿಜಗಳ' ದಿಂದ ರಾಗಿಣಿ ದ್ವಿವೇದಿ ಔಟ್: ಪ್ರಿಯಾ ಮಣಿ ಇನ್

ಚಿತ್ರ ನಿರ್ದೇಶಕ ಶ್ರೀನಿವಾಸರಾಜು ಹಾಗೂ ನಟಿ ರಾಗಿಣಿ ದ್ವಿವೇದಿ ನಡುವಿನ ಕಿತ್ತಾಟದಿಂದಾಗಿ ನಾಟಿ ಕೋಳಿ ಚಿತ್ರದಿಂದ ನಟಿ ರಾಗಿಣಿ ಹೊರ ಬಿದ್ದಿದ್ದಾರೆ.
ರಾಗಿಣಿ ದ್ವಿವೇದಿ
ರಾಗಿಣಿ ದ್ವಿವೇದಿ

ಬೆಂಗಳೂರು: ಚಿತ್ರ ನಿರ್ದೇಶಕ ಶ್ರೀನಿವಾಸರಾಜು ಹಾಗೂ ನಟಿ ರಾಗಿಣಿ ದ್ವಿವೇದಿ ನಡುವಿನ ಕಿತ್ತಾಟದಿಂದಾಗಿ ನಾಟಿ ಕೋಳಿ ಚಿತ್ರದಿಂದ ನಟಿ ರಾಗಿಣಿ ಹೊರ ಬಿದ್ದಿದ್ದಾರೆ. ರಾಗಿಣಿ ಬದಲಿಗೆ ಚಿತ್ರದಲ್ಲಿ ಪ್ರಿಯಾಮಣಿ ನಟಿಸಲಿದ್ದಾರೆ.
ಚಿತ್ರದ ಪ್ರಮೋಶನ್ ಗಾಗಿ ಬೆಂಗಳೂರಿನ ವಿಲ್ಸನ್ ಗಾರ್ಡನ್ ನ ಸ್ಟುಡಿಯೋದಲ್ಲಿ ಫೋಟೋಶೂಟ್ ನಡೀತಿತ್ತು. ಈ ವೇಳೆ ಸ್ಟುಡಿಯೋಗೆ ಬಂದ ರಾಗಿಣಿ ಬಾಯ್ ಫ್ರೆಂಡ್ ನಾಟಿ ಕೋಳಿ ಚಿತ್ರವನ್ನು ಯಾವುದೇ ಕಾರಣಕ್ಕೂ ಚಿತ್ರ ನಿರ್ದೇಶನ ಮಾಡಬಾರದು. ಒಂದು ವೇಳೆ ನಿರ್ದೇಶನ ಮಾಡಿದ್ರೆ ಕೊಲೆ ಮಾಡುವುದಾಗಿ ಡೈರೆಕ್ಟರ್ ಶ್ರೀನಿವಾಸ ರಾಜು ಗೆ ಆವಾಜ್ ಹಾಕಿದ್ದರಂತೆ. ಇಷ್ಟೆಲ್ಲಾ ನಡಿತೀದ್ರು ನಟಿ ರಾಗಿಣಿ ದ್ವಿವೇದಿ ತುಟಿಕ್ ಪಿಟಕ್ ಎನ್ನದೇ ಇದ್ದದ್ದು ನಿರ್ದೇಶಕರನ್ನು ಕೆರಳಿಸಿದೆ. ಹೀಗಾಗಿ ಅಡ್ವಾನ್ಸ್ ಅಂತಾ ನೀಡಿದ್ದ 10 ಲಕ್ಷ ಹಣವನ್ನು ವಾಪಸ್ ಕೊಡಿಸಬೇಕೆಂದು ನಿರ್ಮಾಪಕರು ಫಿಲಂ ಚೇಂಬರ್ ಮೊರೆ ಹೋಗಿದ್ದಾರೆ.
ಡೇಟ್ಸ್ ಅಭಾವದಿಂದ ಮೊದಲು ನಾಟಿಕೋಳಿ ಚಿತ್ರದಲ್ಲಿ ನಟಿಸಲ್ಲ ಎಂದಿದ್ದ ಪ್ರಿಯಾಮಣಿ ಮತ್ತೆ ಈ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರಂತೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com