ಬೀದಿಯಲ್ಲೊಂದು ಪ್ರೇಮ ಕಥೆ

ಬೀದಿ ಲವ್ ಸ್ಟೋರಿ ಎನ್ನುವ ಹೆಸರು ಇಟ್ಟಿದ್ದೇನೆ. ಸಿನಿಮಾ ಚೆನ್ನಾಗಿ ಬಂದಿದೆ. ಒಳ್ಳೆಯ ಕಥೆಎಂಬುದರಲ್ಲಿ ಅನುಮಾನವಿಲ್ಲ. ಚಿತ್ರದ ನಾಯಕ ಅರುಣ್, ನಾಯಕಿ ರೂಪಿಕಾ...
ಅರುಣ್ - ರೂಪಿಕಾ
ಅರುಣ್ - ರೂಪಿಕಾ
Updated on: 

ಚಿತ್ರರಂಗದಲ್ಲಿ ಮಾತ್ರ ಪ್ರೇಮ ಕಥೆಗಳಿಗೆ ಕೊರತೆ ಇಲ್ಲ. ಏನೇನೋ ಹೆಸರಿನಲ್ಲಿ ತೆರೆ ಮೇಲೆ ಈ ಪ್ರೇಮ ಕಥೆಗಳು ಅನಾವರಣಗೊಂಡಿವೆ. ಆದರೂ ಲವ್ ಸ್ಟೋರಿಗಳು ಕಾಲ ಇನ್ನೂ ಮುಗಿಯುತ್ತಿಲ್ಲ ಎಂಬುದಕ್ಕೆ ಗಾಂಧಿನಗರದಲ್ಲಿ ಮತ್ತೊಂದು ಪ್ರೇಮ ಕಥೆಯ ಚಿತ್ರ ಹುಟ್ಟಿಕೊಂಡಿದೆ. ಇದರ ಹೆಸರು, `ಹಾದಿ ಬೀದಿ ಲವ್ ಸ್ಟೋರಿ'.

ಚಿತ್ರೀಕರಣ ಹಾಗೂ ಡಬ್ಬಿಂಗ್ ಕೆಲಸವನ್ನೂ ಮುಗಿಸಿಕೊಂಡಿರುವ ಈ ಚಿತ್ರದ ನಾಯಕ ಅರುಣ್. ಈ ಹಿಂದೆ `ಗೊಂಬೆಗಳ ಲವ್' ಚಿತ್ರದಲ್ಲಿ ಅಭಿನಯಿಸಿ ಗಮನ ಸೆಳೆದ ನಟ. ಚಿತ್ರದ ನಾಯಕಿ ರೂಪಿಕಾ.

ಚಂದ್ರಶೇಖರ್ ಎಂಬುವವರು ಈ ಚಿತ್ರವನ್ನು ನಿರ್ದೇಶಿಸಿದ್ದು, ಸುಧೀರ್ ಗೌಡ ನಿರ್ಮಾಣ ಮಾಡಿದ್ದಾರೆ. ಅಂದಹಾಗೆ ಇದುನೈಜ ಪ್ರೇಮ ಕಥೆಯನ್ನು ಆಧರಿಸಿದ ಸಿನಿಮಾ. `ದೊಡ್ಡಬಳ್ಳಾಪುರದಲ್ಲಿ ನಡೆದ ಪ್ರೇಮಿಗಳ ಕಥೆಯನ್ನು ತೆಗೆದುಕೊಂಡು ಈ ಸಿನಿಮಾ ಮಾಡಿದ್ದೇನೆ. ಸಾಕಷ್ಟು ಪ್ರೇಮ ಕಥೆಗಳು ಬೀದಿಯಲ್ಲೇ ಹುಟ್ಟುವುದು. ಹೀಗಾಗಿ ಚಿತ್ರಕ್ಕೆ ಹಾದಿ ಬೀದಿ ಲವ್ ಸ್ಟೋರಿ ಎನ್ನುವ ಹೆಸರು ಇಟ್ಟಿದ್ದೇನೆ. ಸಿನಿಮಾ ಚೆನ್ನಾಗಿ ಬಂದಿದೆ. ಒಳ್ಳೆಯ ಕಥೆಎಂಬುದರಲ್ಲಿ ಅನುಮಾನವಿಲ್ಲ. ಚಿತ್ರದ ನಾಯಕ ಅರುಣ್, ನಾಯಕಿ ರೂಪಿಕಾ ಇಬ್ಬರೂ ಚೆನ್ನಾಗಿ ಅಭಿನಯಿಸಿದ್ದಾರೆ' ಎಂಬುದು ನಿರ್ದೇಶಕರ ಮಾತು.

ಪ್ರೇಮ ಕಥೆ ಜತೆಗೆ ಕಾಮಿಡಿ ಕೌಟುಂಬಿಕ ಡ್ರಾಮಾ ಕೂಡ ಇದೆ. ಬೆಂಗಳೂರು, ಮೈಸೂರು, ದೇವನಹಳ್ಳಿ ಮುಂತಾದ ಕಡೆ ಚಿತ್ರೀಕರಣ ಮಾಡಲಾಗಿದೆ. ನಿರ್ಮಾಪಕ ಶ್ರೀಧರ್ ಗೌಡ ಖುಷಿಯಾಗಿದ್ದರು. ಅವರ ಸಂಭ್ರಮಕ್ಕೆ ಕಾರಣ, ತಾವು ಅಂದುಕೊಂಡಂತೆ ನಿರ್ದೇಶಕರು ಸಿನಿಮಾ ಮಾಡಿ ಕೊಟ್ಟಿರುವುದು.

`ಈಗಾಗಲೇ ತೆರೆ ಮೇಲೆ ಪ್ರೇಕ್ಷಕರು ಸಾಕಷ್ಟು ಲವ್ ಸ್ಟೋರಿಗಳನ್ನು ನೋಡಿದ್ದಾರೆ. ಇದು ಮತ್ತೊಂದು ರೀತಿಯ ಪ್ರೇಮ ಕಥೆ. ಎಲ್ಲ ವರ್ಗದವರಿಗೂ ಇಷ್ಟವಾಗುತ್ತದೆ' ಎಂದರು ಶ್ರೀಧರ್ ಗೌಡ.

ಚಿತ್ರದ ನಾಯಕ ಅರುಣ್ ಅವರಿಗೆ `ಗೊಂಬೆಗಳ ಲವ್' ಚಿತ್ರದ ನಂತರ ಮತ್ತೊಂದು ಒಳ್ಳೆಯ ಕಥೆ ಸಿಕ್ಕಿದೆ. ತನ್ನ ಪಾತ್ರವನ್ನು ತುಂಬಾ ಆಪ್ತವಾಗಿ ಈ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ತನ್ನ ಪಾತ್ರದ ಮೂಲಕ ಪ್ರತಿಯೊಬ್ಬ ಪ್ರೇಮಿಗೂ ಹೊಸ ರೀತಿಯ ಸಂದೇಶ ಕೊಟ್ಟಿದ್ದಾರೆ ಎಂಬುದು ಅರುಣ್ ಹೇಳುವ ಮಾತು. ಈ ಚಿತ್ರದ ಮೂಲಕ ಮತ್ತೆ ಚಿತ್ರರಂಗಕ್ಕೆ ಬಂದ ಅನುಭವಕ್ಕೆ ರೂಪಿಕಾ ಪಾತ್ರವಾಗಿದ್ದಾರಂತೆ. ಒಳ್ಳೆಯ ಪಾತ್ರವನ್ನು ಈ ಚಿತ್ರದಲ್ಲಿ ನಿರ್ವಹಿಸಿರುವುದಾಗಿ ರೂಪಿಕಾ ಹೇಳಿಕೊಂಡರು. ಬಾಬಿ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ನಾಗರಾಜ್ ಚಿತ್ರಕ್ಕೆ ಛಾಯಾಗ್ರಾಹಣ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com