

ಹೈದರಾಬಾದ್: ದೇಶಾದ್ಯಂತ ಕೆಲವು ಸಾಹಿತಿಗಳು ಮತ್ತು ಕಲಾವಿದರು ಆರಂಭಿಸಿರುವ ಅಸಹಿಷ್ಣುತೆ ವಿರೋಧಿ ಚಳವಳಿಗೆ ಸೇರಲು ದಕ್ಷಿಣ ಭಾರತದ ಖ್ಯಾತ ನಟ ಕಮಲ್ ಹಾಸನ್ ನಿರಾಕರಿಸಿದ್ದಾರೆ.
ಕಲಾವಿದರು ಮತ್ತು ಸಾಹಿತಿಗಳು ತಮ್ಮ ಪ್ರಶಸ್ತಿಗಳನ್ನು ಹಿಂತಿರುಗಿಸುತ್ತಿರುವುದಕ್ಕೆ ತಮ್ಮ ವಿರೋಧವಿದೆ. ತಾವು ಆ ಚಳವಳಿಯ ಭಾಗವಾಗಲು ಇಷ್ಟಪಡುವುದಿಲ್ಲ. ಭಾರತ ದೇಶ ಯಾವಾಗಲೂ ಅಸಹಿಷ್ಣುತೆಯನ್ನು ಸಹಿಸುತ್ತಾ ಬಂದಿದೆ. ನಾವು ಅದರ ವಿರುದ್ಧ ಬೌದ್ಧಿಕವಾಗಿ ಹೋರಾಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರಶಸ್ತಿಯನ್ನು ಹಿಂತಿರುಗಿಸುವುದು ನಿರರ್ಥಕ ಪ್ರಯತ್ನ. ಅಸಹಿಷ್ಣುತೆ ಸಮಸ್ಯೆಯನ್ನು ಚರ್ಚೆ ಮೂಲಕ ಹೋರಾಡಿ ಗೆಲ್ಲಬೇಕು ಎಂದರು. ಕಮಲ್ ಹಾಸನ್ ಅವರು ತಮ್ಮ ಚಿತ್ರಗಳಾದ ವಿಶ್ವರೂಪಂ ಮತ್ತು ಉತ್ತಮ್ ವಿಲನ್ ಬಿಡುಗಡೆ ಸಂದರ್ಭಗಳಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳಿಂದ ಹಲವಾರು ಟೀಕೆಗಳನ್ನು ಎದುರಿಸಿದ್ದರು. ಆ ಚಿತ್ರಗಳಲ್ಲಿನ ಅಂಶಗಳ ಬಗ್ಗೆ ವಿವಾದಗಳೆದ್ದಿದ್ದವು.