ಎಲ್ಲ ಮಹಿಳೆಯರೂ ತಮ್ಮ ಬಗ್ಗೆ ನಂಬಿಕೆಯಿಟ್ಟುಕೊಳ್ಳಬೇಕು: ದೀಪಿಕಾ ಪಡುಕೋಣೆ

ಎಲ್ಲ ಮಹಿಳೆಯರೂ ತಮ್ಮ ಮೇಲೆ ನಂಬಿಕೆಯಿಟ್ಟುಕೊಳ್ಳಬೇಕು ಮತ್ತು ತಮ್ಮ ಸ್ವಸಾಮರ್ಥ್ಯದ ಬಗ್ಗೆ ನಂಬಿಕೆ ಕಳೆದುಕೊಳ್ಳಬಾರದು ಎಂದು ಬಾಲಿವುಡ್ ನಟಿ ದೀಪಿಕಾ
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ
Updated on: 

ಮುಂಬೈ: ಎಲ್ಲ ಮಹಿಳೆಯರೂ ತಮ್ಮ ಮೇಲೆ ನಂಬಿಕೆಯಿಟ್ಟುಕೊಳ್ಳಬೇಕು ಮತ್ತು ತಮ್ಮ ಸ್ವಸಾಮರ್ಥ್ಯದ ಬಗ್ಗೆ ನಂಬಿಕೆ ಕಳೆದುಕೊಳ್ಳಬಾರದು ಎಂದು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹೇಳಿದ್ದಾರೆ.

ರೇಡಿಯೋ ವಾಹಿನಿಯೊಂದರಲ್ಲಿ ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡಿದ ದೀಪಿಕಾ "ಮಹಿಳೆಯರನ್ನು ಸಂಭ್ರಮಿಸಲು ಒಂದು ದಿನದ ಅವಶ್ಯಕತೆ ಇಲ್ಲ. ಆದುದರಿಂದ ಮಹಿಳೆಯರನ್ನು ಸಂಭ್ರಮಿಸಲು ಮಹಿಳಾ ದಿನ, ನವರಾತ್ರಿ ಅಥವಾ ಇನ್ಯಾವುದೇ ಹಬ್ಬವನ್ನು ಎದುರು ನೋಡುವ ಅವಶ್ಯಕತೆ ಇಲ್ಲ.

"ಮಹಿಳೆಯರು ಏಕಕಾಲಕ್ಕೆ ಹಲವು ಕೆಲಸಗಳನ್ನು ಮಾಡಬಲ್ಲವರು.  ಮಹಿಳೆಯರಿಗೆ ನನ್ನ ಸಂದೇಶವೆಂದರೆ ಎಲ್ಲ ಮಹಿಳೆಯರೂ ತಮ್ಮ ಮೇಲೆ ನಂಬಿಕೆಯಿಟ್ಟುಕೊಳ್ಳಬೇಕು ಮತ್ತು ತಮ್ಮ ಸ್ವಸಾಮರ್ಥ್ಯದ ಬಗ್ಗೆ ನಂಬಿಕೆ ಕಳೆದುಕೊಳ್ಳಬಾರದು" ಎಂದಿದ್ದಾರೆ.

ಈಗ ಸಂಜಯ್ ಲೀಲಾ ಭನ್ಸಾಲಿ ಅವರ 'ಬಾಜಿರಾವ್ ಮಸ್ತಾನಿ' ಅವರ ಸಿನೆಮಾದಲ್ಲಿ ನಟಿಸಿರುವ ದೀಪಿಕಾ ಹಲವಾರು ವರ್ಷಗಳ ನಂತರ ಹಿಂದಿ ಚಿತ್ರರಂಗದಲ್ಲಿ ತಳವೂರಿರುವುದಾಗಿ ತಿಳಿಸಿದ್ದಾರೆ. ಸಿನೆಮಾ ಡಿಸೆಂಬರ್ ೧೮ ಕ್ಕೆ ಬಿಡುಗಡೆಯಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com