ಆದಾಯ ತೆರಿಗೆ ದಾಳಿಗೆ ಬೆದರಿದ ಪುಲಿ

ತಮಿಳಿನ ಮೆಗಾಮೂವಿ `ಪುಲಿ' ಬಿಡುಗಡೆಯ ದಿನ ಸಾಕಷ್ಟು ಸಂಕಷ್ಟ ಅನುಭವಿಸಿತು. ನಿರ್ಮಾಪಕರು ಮತ್ತು ತಾರೆಯರ...
ಪುಲಿ ಚಿತ್ರದ ಪೋಸ್ಟರ್
ಪುಲಿ ಚಿತ್ರದ ಪೋಸ್ಟರ್
Updated on

ಚೆನ್ನೈ: ತಮಿಳಿನ ಮೆಗಾಮೂವಿ `ಪುಲಿ' ಬಿಡುಗಡೆಯ ದಿನ ಸಾಕಷ್ಟು ಸಂಕಷ್ಟ ಅನುಭವಿಸಿತು. ನಿರ್ಮಾಪಕರು ಮತ್ತು ತಾರೆಯರ ಮನೆ ಮೇಲೆ ಐಟಿ ಅಧಿಕಾರಿಗಳ ದಾಳಿಯ ಪರಿಣಾಮ ದಕ್ಷಿಣ ಭಾರತದ ಥಿಯೇಟರ್ ಗಳಲ್ಲಿ ಸಿನೆಮಾದ ಮೊದಲ ಶೋಗಳು ಅಸ್ತವ್ಯಸ್ತಗೊಂಡವು.

ಕರ ಪಾವತಿ ವಿಚಾರದಲ್ಲಿ ತೊಂದರೆ ಅನುಭವಿಸಿದ `ಪುಲಿ'ಯ ಬುಧವಾರ ಬೆಳಗಿನ ಶೋಗಳು ಪ್ರದರ್ಶಿತಗೊಳ್ಳಲಿಲ್ಲ.ಪ್ರದರ್ಶನಕ್ಕೆ ವ್ಯವಸ್ಥೆ ಮಾಡಬೇಕಾಗಿದ್ದವರು ಆದಾಯಕರ ದಾಳಿಯಲ್ಲಿ ಸಿಲುಕಿದ್ದರಿಂದ ಈ ಪಡಿಪಾಟಲು ಉಂಟಾಯಿತು. ನಂತರ ತೆರೆಮರೆಯಲ್ಲಿ ನಡೆದ ಪ್ರಯತ್ನಗಳ ಫಲ ವಾಗಿ ಮಧ್ಯಾಹ್ನ ನಂತರದ ಶೋಗಳು ಯಶಸ್ವಿಯಾದವು. ಹಲವಾರು ಕಡೆ
ಶೋಗಳನ್ನು ತಡೆದದ್ದರಿಂದ ವ್ಯಗ್ರರಾದ ನಟ ವಿಜಯ್ ಅಭಿಮಾನಿಗಳು ಪ್ರತಿಭಟನೆ, ಕಲ್ಲುತೂರಾಟ ನಡೆಸಿದರು. ವಿಜಯ್, ನಯನತಾರಾ, ನಿರ್ಮಾಪಕ ಇಳಯ ದಳಪತಿ ನಿವಾಸಕ್ಕೆ ಐಟಿ ದಾಳಿ ನಡೆದಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com