ಬಿಗ್ ಬಾಸ್ ಗೆ ಬರಲೊಲ್ಲೆ ಎಂದ ರಾಗಿಣಿ ದ್ವಿವೇದಿ

ಅಕ್ಟೋಬರ್ ೧೮ ರಿಂದ ಕನ್ನಡದ ಕಿರುತೆರೆಯಲ್ಲಿ ಮೂಡಿಬರಲಿರುವ ಬಿಗ್ ಬಾಸ್-೩ ನೆ ಅವತರಿಣಿಕೆಯ ಜ್ವರ ಏರುತ್ತಿದೆ. ಇದರಲ್ಲಿ ಯಾರೆಲ್ಲಾ ಭಾಗವಹಿಸಲಿದ್ದಾರೆ ಎಂಬ
ನಟಿ ರಾಗಿಣಿ ದ್ವಿವೇದಿ
ನಟಿ ರಾಗಿಣಿ ದ್ವಿವೇದಿ
Updated on: 

ಬೆಂಗಳೂರು: ಅಕ್ಟೋಬರ್ ೧೮ ರಿಂದ ಕನ್ನಡದ ಕಿರುತೆರೆಯಲ್ಲಿ ಮೂಡಿಬರಲಿರುವ ಬಿಗ್ ಬಾಸ್-೩ ನೆ ಅವತರಿಣಿಕೆಯ ಜ್ವರ ಏರುತ್ತಿದೆ. ಇದರಲ್ಲಿ ಯಾರೆಲ್ಲಾ ಭಾಗವಹಿಸಲಿದ್ದಾರೆ ಎಂಬ ಕುತೂಹಲ ಇನ್ನೂ ತಣಿದಿಲ್ಲ.

ಕೆಲವು ದಿನಗಳ ಮುಂಚೆಯಷ್ಟೇ ನಟ ರಕ್ಷಿತ್ ಶೆಟ್ಟಿ ಅವರಿಗೆ ಭಾಗವಹಿಸಲು ಆಹ್ವಾನ ಬಂದು ಅವರು ಅದನ್ನು ನಿರಾಕರಿಸಿ ಫೇಸ್ಬುಕ್ ನಲ್ಲಿ ಬರೆದುಕೊಂಡಿದ್ದರು. ಇದರ ಬೆನ್ನಲ್ಲೇ ನಟಿ ರಾಗಿಣಿ ದ್ವಿವೇದಿ ಕೂಡ ಬಿಗ್ ಬಾಸ್ ನಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿ ತಮ್ಮ ಅಭಿಮಾನಿಗಳು ಕುತೂಹಲಕ್ಕೆ ತಣ್ಣಿರೆರಚಿದ್ದಾರೆ. ಪ್ರತಿ ಬಿಗ್ ಬಾಸ್ ಸಮಯದಲ್ಲೂ ರಾಗಿಣಿ ಅವರ ಹೆಸರು ಕೇಳಿ ಬರುದು ಸರ್ವೇ ಸಾಮಾನ್ಯ.

ಈಗ ಈ ಬಿಗ್ ಬಾಸ್ ೩ರ ಚಿತ್ರೀಕರಣ ಬೆಂಗಳೂರಿನಲ್ಲೇ ನಡೆಯುವುದಾಗಿ ತಿಳಿದುಬಂದಿದ್ದು, ನಟಿ ಮೈತ್ರಿಯಿ ಗೌಡ ಮತ್ತು ಹುಚ್ಚ ವೆಂಕಟೇಶ್ ಭಾಗವಹಿಸುವುದು ಬಹುತೇಕ ಖಚಿತ ಎಂದು ತಿಳಿದುಬಂದಿದೆ. ಈ ರಿಯಾಲಿಟಿ ಕಾರ್ಯಕ್ರಮವನ್ನು ಹೋಸ್ಟ್ ಮಾಡುವವರು ಸುದೀಪ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com