ಅ.25ರಿಂದ ಬಿಗ್‌ಬಾಸ್ ಆರಂಭ, ಕಿಚ್ಚನ ಮನೆಯಲ್ಲಿ ಯಾರೆಲ್ಲ ಇದ್ದಾರೆ?

ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ ಸೀಸನ್-3' ಅಕ್ಟೋಬರ್ 25ರಿಂದ ಆರಂಭವಾಗಲಿದ್ದು,...
ಬಿಗ್ ಸ್ಪರ್ಧಿಗಳಾದ ರೆಹಮಾನ್, ಹುಚ್ಚ ವೆಂಕಟ್, ಮೈತ್ರಿಯಾ ಗೌಡ
ಬಿಗ್ ಸ್ಪರ್ಧಿಗಳಾದ ರೆಹಮಾನ್, ಹುಚ್ಚ ವೆಂಕಟ್, ಮೈತ್ರಿಯಾ ಗೌಡ

ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ ಸೀಸನ್-3' ಅಕ್ಟೋಬರ್ 25ರಿಂದ ಆರಂಭವಾಗಲಿದ್ದು, ಈ ಬಾರಿ ಕಿಚ್ಚ ಸುದೀಪ್ ಮನೆಯಲ್ಲಿ ಯಾರೆಲ್ಲಾ ಇರುತ್ತಾರೆ ಎಂಬ ಕುತೂಹಲಕ್ಕೆ ಬಹುತೇಕ ತೆರೆ ಬಿದ್ದಿದೆ.

ಬಿಗ್‌ಬಾಸ್ ಮನೆಯ ಸ್ಪರ್ಧಿಗಳ ಬಗ್ಗೆ ಚಾನೆಲ್ ಎಷ್ಟೇ ಗೌಪ್ಯತೆ ಕಾಪಾಡಿಕೊಂಡರೂ, ಕೆಲವು ಸ್ಪರ್ಧಿಗಳ ಹೆಸರು ಲೀಕ್ ಆಗಿದೆ.

ಮೂಲಗಳ ಪ್ರಕಾರ, ಕಿಚ್ಚನ ಮನೆಯಲ್ಲಿ ಹುಚ್ಚ ವೆಂಕಟ್, ಟಿವಿ9 ರೆಹಮಾನ್, 'ನಾಗಮಂಡಲ' ಚಿತ್ರದ ಖ್ಯಾತಿಯ ವಿಜಯಲಕ್ಷ್ಮಿ, 'ಲಕ್ಷ್ಮಿಬಾರಮ್ಮ' ಮಾಸ್ಟರ್ ಆನಂದ್, ಧಾರವಾಹಿಯ ಚಂದನ್‌, ಮೈತ್ರಿಯಾ ಗೌಡ, ಸುನಾಮಿ ಕಿಟ್ಟಿ,  "ರ್ಯಾಂಬೋ' ಚಿತ್ರಿದ ಖ್ಯಾತಿಯ ಮಾಧುರಿ, 'ರಾಧಾ ಕಲ್ಯಾಣ'ದ ಕೃತಿಕಾ ಇರಲಿದ್ದಾರೆ.

ಅಗ್ನಿಸಾಕ್ಷಿ ಮತ್ತು ಅಕ್ಕ ಧಾರವಾಹಿಗಳ ಹಿನ್ನೆಲೆಯಲ್ಲಿ ಈ ಬಾರಿ ಕಲರ್ಸ್‌ ಕನ್ನಡ ವಾಹಿನಿ ಬಿಗ್ ಬಾಸ್ ಪ್ರಸಾರದ ಸಮಯ ಬದಲಾಯಿಸಿದ್ದು, ರಾತ್ರಿ 9 ಗಂಟೆಯಿಂದ ಪ್ರಸಾರವಾಗಲಿದೆ. ಈ ಹಿಂದೆ ರಾತ್ರಿ 8ಗಂಟೆಗೆ ಪ್ರಸಾರವಾಗುತ್ತಿತ್ತು.

ಒಟ್ಟು 15 ಸ್ಪರ್ಧಿಗಳು 100 ದಿನಗಳ ಬಿಗ್ ಬಾಸ್ ಮನೆಯಲ್ಲಿರುತ್ತಾರೆ. ಒಟ್ಟಿನಲ್ಲಿ ಈ ಬಾರಿ ಕಲರ್ಸ್ ಕನ್ನಡ ಘಟಾನುಘಟಿ ಸ್ಪರ್ಧಿಗಳನ್ನೇ ಮನೆಗೆ ಸೇರಿಸಿದ್ದು, ಜಗಳಗಂಟರು, ಮಾತುಗಾರರು, ಗ್ಲಾಮರ್‌, ಹ್ಯೂಮರ್‌, ಡ್ರೀಮರ್‌ ಎಲ್ಲರೂ ಮನೆಯ ಸದಸ್ಯರಾಗಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com