

ಲಂಡನ್: ಆಸ್ಕರ್ ಪ್ರಶಸ್ತಿಗೆ ನಾಮಾಂಕಿತವಾಗಿರುವುದಕ್ಕೆ ಸಂತಸಗೊಂಡಿರುವ ಹಾಲಿವುಡ್ ನಟ ಜಾನಿ ಡೆಪ್, ಆಸ್ಕರ್ ಎಂದಿಗೂ ಗೆಲ್ಲುವುದು ಬೇಡ ಎಂದಿದ್ದಾರೆ.
'ಬ್ಲ್ಯಾಕ್ ಮಾಸ್' ಸಿನೆಮಾದ ನಟನೆಗಾಗಿ ಆಸ್ಕರ್ ನಾಮಾಂಕಿತವಾಗಿರುವ ನಟ ನನಗೆ ಆಸ್ಕರ್ ಗೆಲ್ಲಲು ಇಷ್ಟವಿಲ್ಲ ಏಕೆಂದರೆ ಅದು ಮತ್ತೊಬ್ಬನ ಜೊತೆ ಸ್ಪರ್ಧಿಸಿದಂತೆ ಎಂದು ತಿಳಿಸಿದ್ದಾರೆ ಎಂದು ದ ಇಂಡಿಪೆಂಡೆಂಟ್ ಪತ್ರಿಕೆ ವರದಿ ಮಾಡಿದೆ.
ನಾನು ಯಾರ ಜೊತೆಗೂ ಸ್ಪರ್ಧೆಗೆ ಇಳಿದಿಲ್ಲ ಎಂದು ೫೨ ವರ್ಷದ ನಟ ಸ್ಪಷ್ಟಪಡಿಸಿದ್ದಾರೆ.
ಈ ಹಿಂದೆ ಪೈರೇಟ್ಸ್ ಆಫ್ ದ ಕೆರೆಬಿಯನ್ ಮತ್ತು ಫೈಂಡಿಂಗ್ ನೆವೆರ್ಲ್ಯಾಂಡ್ ಮತ್ತು ಸ್ವೀನಿ ಟಾಡ್ ಸಿನೆಮಾಗಳ ನಟನೆಗಾಗಿ ಈ ನಟ ಆಸ್ಕರ್ ಪ್ರಶಸ್ತಿಗೆ ನಾಮಾಂಕಿತಗೊಂಡಿದ್ದರು.
ಅಮೆರಿಕಾದ ವಿಮರ್ಶಕರಿಂದ 'ಬ್ಲ್ಯಾಕ್ ಮಾಸ್' ಸಿನೆಮಾಗೆ ಒಳ್ಳೆಯ ಪ್ರತಿಕ್ರಿಯೆ ಬಂದಿದೆ.