ಉಪ್ಪಿ ಜೊತೆ ನಟಿಸಲಿರುವ ರಂಗಿತರಂಗದ ಅವಂತಿಕ

ರಂಗಿತರಂಗದ ಅಭೂತಪೂರ್ವ ಅಯಶಸ್ಸಿನ ನಂತರ, ಸಿನೆಮಾದ ನಟಿಯರಲ್ಲಿ ಒಬ್ಬರಾದ ಅವಂತಿಕಾ ಶೆಟ್ಟಿ ಈಗ ಉಪೇಂದ್ರ ಅವರ ಕಲ್ಪನಾ-೨ ಸಿನೆಮಾದಲ್ಲಿ ನಟಿಸಲಿದ್ದಾರೆ
ರಂಗಿತರಂಗದ ನಟಿ ಅವಂತಿಕಾ ಶೆಟ್ಟಿ
ರಂಗಿತರಂಗದ ನಟಿ ಅವಂತಿಕಾ ಶೆಟ್ಟಿ

ಬೆಂಗಳೂರು: ರಂಗಿತರಂಗದ ಅಭೂತಪೂರ್ವ ಅಯಶಸ್ಸಿನ ನಂತರ, ಸಿನೆಮಾದ ನಟಿಯರಲ್ಲಿ ಒಬ್ಬರಾದ ಅವಂತಿಕಾ ಶೆಟ್ಟಿ ಈಗ ಉಪೇಂದ್ರ ಅವರ ಕಲ್ಪನಾ-೨ ಸಿನೆಮಾದಲ್ಲಿ ನಟಿಸಲಿದ್ದಾರೆ. ಇದು ತಮಿಳು ಚಿತ್ರ ಕಾಂಚನಾ-೨ ರ ರಿಮೇಕ್. ತಮಿಳು ಚಿತ್ರವನ್ನು ರಾಘವ ಲಾರೆನ್ಸ್ ನಿರ್ದೇಶಿಸಿದ್ದರು.

ಕನ್ನಡ ಸಿನೆಮಾದ ನಿರ್ದೇಶಕ ಆರ್ ಅನಂತ ರಾಜು ಅವರ ಪ್ರಕಾರ ತಮಿಳಿನಲ್ಲಿ ತಪ್ಸೀ ಮಾಡಿದ್ದ ಪಾತ್ರವನ್ನು ಅವಂತಿಕ ಹಾಗೂ ನಿತ್ಯಾ ಮೆನನ್ ಪಾತ್ರದಲ್ಲಿ ಪ್ರಿಯಾಮಣಿ ಕಾಣಿಸಿಕೊಳ್ಳಲಿದ್ದಾರಂತೆ. ನವೆಂಬರ್ ೧೮ ರಂದು ಸಿನೆಮಾದ ಮುಹೂರ್ತ ಸಮಾರಂಭ ನಿಗದಿಯಾಗಿದ್ದು, ಅಂದೇ ಚಿತ್ರೀಕರಣ ಕೂಡ ಪ್ರಾರಂಭವಾಗಲಿದೆ.

ಸದ್ಯಕ್ಕೆ ಹಲವಾರು ಜಾಹೀರಾತುಗಳು ಹಾಕು ಶಾರ್ಟ್ ಫಿಲ್ಮ್ ಗಳಲ್ಲಿ ನಟಿಸುತ್ತಾ ಬ್ಯುಸಿಯಾಗಿರುವ ನಟಿ ಅವಂತಿಕಾ ಒಂದು ಇರಾನಿಯನ್ ಸಿನೆಮಾದಲ್ಲಿ ಕೂಡ ನಟಿಸುತ್ತಿದ್ದಾರಂತೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com