ಕೃಷ್ಣನ್ ಲವ್ ಸ್ಟೋರಿ ಆಯ್ತು; ಈಗ ಸೆಕಂಡ್ ಹ್ಯಾಂಡ್ ಲವರ್!

ಸತ್ಯ ಇನ್ ಲವ್, ಗಿಲ್ಲಿ ಮತ್ತು ಲಕ್ಷ್ಮಿ ಸಿನೆಮಾಗಳನ್ನು ನಿರ್ದೇಶಿರುವ ನಿರ್ದೇಶಕ ರಾಘವ ಮರಸೂರು(ರಾಘವ ಲೋಕಿ) ಈಗ ಲವರ್ ಬಾಯ್ ಅಜಯ್ ರಾವ್
ಸೆಕಂಡ್ ಹ್ಯಾಂಡ್ ಲವರ್ ಸಿನೆಮಾ ಸ್ಟಿಲ್
ಸೆಕಂಡ್ ಹ್ಯಾಂಡ್ ಲವರ್ ಸಿನೆಮಾ ಸ್ಟಿಲ್
Updated on: 

ಬೆಂಗಳೂರು: ಸತ್ಯ ಇನ್ ಲವ್, ಗಿಲ್ಲಿ ಮತ್ತು ಲಕ್ಷ್ಮಿ ಸಿನೆಮಾಗಳನ್ನು ನಿರ್ದೇಶಿರುವ ನಿರ್ದೇಶಕ ರಾಘವ ಮರಸೂರು(ರಾಘವ ಲೋಕಿ) ಈಗ ಲವರ್ ಬಾಯ್ ಅಜಯ್ ರಾವ್ ಜೊತೆ ಸೆಕಂಡ್ ಹ್ಯಾಂಡ್ ಲವರ್ ಚಿತ್ರದ ಬಿಡುಗಡೆಗೆ ಮುಂದಾಗಿದ್ದಾರೆ.

ಈ ಸಿನೆಮಾ ಈಗ ಅರ್ಜುನ, ಚಂದ್ರಿಕ, ನಾವು ಅವನಲ್ಲ ಅವಳು ಸಿನೆಮಾಗಳೊಂದಿಗೆ ಶುಕ್ರವಾರ ಬಿಡುಗಡೆಯಾಗಲಿದೆ. ಕಳೆದ ನವೆಂಬರ್ ನಲ್ಲಿ ಚಿತ್ರೀಕರಣ ಸಂಪೂರ್ಣಗೊಂಡಿದ್ದರೂ ಇಷ್ಟು ದಿನ ಕಾದದ್ದನು ವಿವರಿಸುವ ರಾಘವ "ಸಿನೆಮಾ ಬಿಡುಗಡೆಗೆ ಸಿದ್ಧವಾಗಿದ್ದರು, ಅಜಯ್ ಅವರ ಚೊಚ್ಚಲ ನಿರ್ಮಾಣದ ಕೃಷ್ಣ ಲೀಲಾ ಬಿಡುಗಡೆಯಾಗಲೆಂದು ಕಾಯುತ್ತಿದ್ದೆವು. ಮತ್ತು ಆ ಸಿನೆಮಾ ಚೆನ್ನಾಗಿ ಪ್ರದರ್ಶನ ಕಾಣುತ್ತಿದ್ದರಿಂದ ನಾವು ತಡ ಮಾಡಿದೆವು" ಎನ್ನುತ್ತಾರೆ.

ಅಜಯ್ ಈ ಸಿನೆಮಾದಲ್ಲಿ ರಾಕ್ ಸ್ಟಾರ್ ಪಾತ್ರದಲ್ಲಿ ಅಭಿನಯಿಸಿದ್ದಾರೆ, ಪರಿಣಿತಾ ಸುಭಾಶ್ ನಾಯಕನಟಿ. ಸಿನೆಮಾವನ್ನು ೧೭೫ ಸಿನೆಮಾಮಂದಿರಗಳಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆದಿದೆ.

ಗುರುಕಿರಣ್ ಸಂಗೀತ ನೀಡಿದ್ದು, ಕೆ ಎಸ್ ಚಂದ್ರಶೇಖರ್ ಅವರ ಸಿನೆಮ್ಯಾಟೊಗ್ರಫಿ ಚಿತ್ರಕ್ಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com