'ಆಂಗ್ರಿ ಬರ್ಡ್ಸ್' ಮೊದಲ ಟೀಸರ್ ಬಿಡುಗಡೆ

'ಆಂಗ್ರಿ ಬರ್ಡ್ಸ್' ಸಿನೆಮಾದ ಮೊದಲ ಟೀಸರ್ ಬಿಡುಗಡೆಯಾಗಿದ್ದು, ಪಕ್ಷಿಗಳಿಗೆ ಕೋಪವೇಕೆ ಬರುತ್ತದೆ ಮತ್ತು ಅವುಗಳು ಅದನ್ನು ಹೇಗೆ ನಿಯಂತ್ರಿಸುತ್ತವೆ ಎಂಬುದನ್ನು ಚಿತ್ರಿಸಲಾಗಿದೆ.
'ಆಂಗ್ರಿ ಬರ್ಡ್ಸ್' ಅನಿಮೇಶನ್ ಸಿನೆಮಾದ ಒಂದು ದೃಶ್ಯ
'ಆಂಗ್ರಿ ಬರ್ಡ್ಸ್' ಅನಿಮೇಶನ್ ಸಿನೆಮಾದ ಒಂದು ದೃಶ್ಯ

ಲಾಸೇಂಜಲೀಸ್: 'ಆಂಗ್ರಿ ಬರ್ಡ್ಸ್' ಸಿನೆಮಾದ ಮೊದಲ ಟೀಸರ್ ಬಿಡುಗಡೆಯಾಗಿದ್ದು, ಪಕ್ಷಿಗಳಿಗೆ ಕೋಪವೇಕೆ ಬರುತ್ತದೆ ಮತ್ತು ಅವುಗಳು ಅದನ್ನು ಹೇಗೆ ನಿಯಂತ್ರಿಸುತ್ತವೆ ಎಂಬುದನ್ನು ಚಿತ್ರಿಸಲಾಗಿದೆ.

ಈ ಅನಿಮೇಶನ್ ಸಿನೆಮಾದಲ್ಲಿ ಖಳನಾಯಕ ಹಂದಿಯೊಂದು ಕೂಡ ಕಾಣಿಸಿಕೊಳ್ಳಲಿದೆ.

ಒಂದು ದ್ವೀಪದಲ್ಲಿ ಹಾರಲಾಗದ ಪಕ್ಷಿಗಳ ಸಂತತಿ ಇದೆ. ಆ ದ್ವೀಪಕ್ಕೆ ಈ ಹಸಿರು ನಿಗೂಢ ಹಂದಿಗಳು ದಾಳಿಯಿಡುತ್ತವೆ. ಮುಂದಿನದೇ ಸಿನೆಮಾ ಕಥೆ. ಇಷ್ಟು ಗುಟ್ಟನ್ನು ಈ ಟೀಸರ್ ಬಿಟ್ಟುಕೊಟ್ಟಿದೆ. ಪಕ್ಷಿಗಳು ರೆಡ್, ಚಕ್ ಮತ್ತು ಬಾಂಬ್.

ರೆಡ್ ಗೆ ಜೇಸನ್ ಸುಡೇಕಿಸ್, ಚಕ್ ಗೆ ಜೋಶ್ ಗ್ಯಾಡ್ ಮತ್ತು ಬಾಂಬ್ ಗೆ ಡ್ಯಾನಿ ಮೆಕ್ ಬ್ರೈಡ್ ಕಂಠದಾನ ಮಾಡಿದ್ದು ಹಂದಿಗೆ ಬಿಲ್ ಹ್ಯಾಂಡರ್ ಕಂಠದಾನ ಮಾಡಿದ್ದಾರೆ.

ಈ ಬಹು ನಿರೀಕ್ಷಿತ ಅನಿಮೇಶನ್ ಸಿನೆಮಾ ಮೇ ೨೦ ೨೦೧೬ ಕ್ಕೆ ಬಿಡುಗಡೆಯಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com