ಕನಸಿನ ಪಾದಾರ್ಪಣೆಗೆ ಸಿದ್ಧರಾದ ಸಹೋದರಿಯರು

ಬೆಂಬತ್ತಿದ ಕನಸುಗಳನ್ನು ಸಾಕಾರಗೊಳಿಸಲು ಸದಾ ಯತ್ನಿಸುವ ನಟಿ-ನಿರ್ಮಾಪಕಿ ಮತ್ತು ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್, ತಮ್ಮ ಮೂವರು ಹೆಣ್ಣು ಮಕ್ಕಳ ನಟನೆಯ ಆಸೆಯನ್ನು
'ಯಾನ' ಸಿನೆಮಾದಲ್ಲಿ ಪಾದಾರ್ಪಣೆ ಮಾಡಲಿರುವ ವೈಭವಿ, ವೈನಿಧಿ ಮತ್ತು ವೈಸಿರಿ ಸಹೋದರಿಯರು
'ಯಾನ' ಸಿನೆಮಾದಲ್ಲಿ ಪಾದಾರ್ಪಣೆ ಮಾಡಲಿರುವ ವೈಭವಿ, ವೈನಿಧಿ ಮತ್ತು ವೈಸಿರಿ ಸಹೋದರಿಯರು

ಬೆಂಗಳೂರು: ಬೆಂಬತ್ತಿದ ಕನಸುಗಳನ್ನು ಸಾಕಾರಗೊಳಿಸಲು ಸದಾ ಯತ್ನಿಸುವ ನಟಿ-ನಿರ್ಮಾಪಕಿ ಮತ್ತು ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್, ತಮ್ಮ ಮೂವರು ಹೆಣ್ಣು ಮಕ್ಕಳ ನಟನೆಯ ಆಸೆಯನ್ನು ಸಾಕಾರಗೊಳಿಸಲು ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ವೈಭವಿ, ವೈನಿಧಿ ಮತ್ತು ವೈಸಿರಿ ಒಟ್ಟಾಗಿ ಮುಖ್ಯ ಪಾತ್ರಗಳಲ್ಲಿ ನಟಿಸಲಿರುವ 'ಯಾನ' ಸಿನೆಮಾ ಮುಹೂರ್ತಕ್ಕೆ ವಿಜಯಲಕ್ಷ್ಮಿ ಸಿಂಗ್ ಸಜ್ಜಾಗಿದ್ದಾರೆ. ತಾಯಿ ಮತ್ತು ತಂದೆ ಜೈಜಗದೀಶ್ ಅವರ ಮಾರ್ಗದರ್ಶನದಲ್ಲಿ ಈ ಸಹೋದರಿಯರು ಕನಸಿನ ಸಿನೆಮಾ ಪಾದಾರ್ಪಣೆಗೆ ಸಜ್ಜಾಗಿದ್ದಾರೆ.

ಸುನಿ ಈ ಸಿನೆಮಾಗೆ ಸಂಭಾಷಣೆ ಬರೆದಿದ್ದು, ಜೋಷುವಾ ಶ್ರೀಧರ್ ಸಂಗೀತ ನೀಡಲಿದ್ದಾರೆ.  ಸೋಮವಾರ ನಡೆದ ಮುಹೂರ್ತದಲ್ಲಿ ಕನ್ನಡ ಚಿತ್ರೋದ್ಯಮ ಗಣ್ಯರಾದ ಅಂಬರೀಶ್, ರವಿಚಂದ್ರನ್, ಪುನೀತ್ ರಾಜಕುಮಾರ್ ಮತ್ತಿತರು ಭಾಗವಹಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com