'ಲವ್ ಸೋನಿಯಾ'ದ ಭಾಗವಾಗಲು ಖುಷಿಯಾಗಿದೆ: ಅನುಪಮ್ ಖೇರ್

'ಲವ್ ಸೋನಿಯಾ'ಗೂ ಬಿಜೆಪಿ ಪಕ್ಷದ ಅನುಪಮ್ ಖೇರ್ ಅವರ ರಾಜಕೀಯ ವಿರೋಧಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೂ ಯಾವುದೇ ಸಂಬಂಧವಿಲ್ಲ! ಆದರೆ ಭಾರತ-ಅಮೇರಿಕಾ
ಅನುಪಮ್ ಖೇರ್
ಅನುಪಮ್ ಖೇರ್

ಮುಂಬೈ: 'ಲವ್ ಸೋನಿಯಾ'ಗೂ ಬಿಜೆಪಿ ಪಕ್ಷದ ಅನುಪಮ್ ಖೇರ್ ಅವರ ರಾಜಕೀಯ ವಿರೋಧಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೂ ಯಾವುದೇ ಸಂಬಂಧವಿಲ್ಲ! ಆದರೆ ಭಾರತ-ಅಮೇರಿಕಾ ನಿರ್ಮಾಣ ಸಂಸ್ಥೆಯಡಿ ಮೂಡಿ ಬರುತ್ತಿರುವ ಡೇವಿಡ್ ವೋಮಾರ್ಕ್ ನಿರ್ಮಿಸುತ್ತಿರುವ 'ಲವ್ ಸೋನಿಯಾ' ಸಿನೆಮಾದ ಪಾತ್ರಕ್ಕೆ ಆಯ್ಕೆಯಾಗಿರುವುದಕ್ಕೆ ಖುಷಿ ತಂದಿದೆ ಎಂದಿದ್ದಾರೆ ನಟ.

ಮೇ ನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿರುವ 'ಲವ್ ಸೋನಿಯಾ'ದ ನಿರ್ದೇಶಕ ತಬ್ರೇಜ್ ನೂರಾನಿ ಮತ್ತು ವೋಮಾರ್ಕ್ ಅವರಿಗೆ ೬೧ ವರ್ಷದ ನಟ ಶುಭ ಕೋರಿದ್ದಾರೆ.

"ನಿರ್ಮಾಪಕ ಡೇವಿಡ್ ವೋಮಾರ್ಕ್ ಮತ್ತು ನಿರ್ದೇಶಕ ತಬ್ರೇಜ್ ನೂರಾನಿ ಅವರಿಗೆ ಅವರ ಸಿನೆಮಾ 'ಲವ್ ಸೋನಿಯಾ'ಗೆ ಶುಭಾಶಯಗಳು. ಅದರ ಭಾಗವಾಗಿರಲು ಖುಷಿಯಾಗಿದೆ" ಎಂದು ಅನುಪಮ್ ಟ್ವೀಟ್ ಮಾಡಿದ್ದಾರೆ.

ಈ ಸಿನೆಮಾದಲ್ಲಿ ರಿಚಾ ಚಡ್ಡ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಹಿಂದೆ ವೋಮಾರ್ಕ್ 'ಲೈಫ್ ಆಫ್ ಪೈ' ನಿರ್ಮಿಸಿದ್ದರು. ಅದಕ್ಕೂ ಮೊದಲು 'ದ ಹಲ್ಕ್'ಮತ್ತು 'ಜಿ ಐ ಜೋ ರೈಸ್ ಆಫ್ ದ ಕೋಬ್ರಾ' ಸಿನೆಮಾಗಳಿಗೆ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ನಿರ್ವಹಿಸಿದ್ದರು.

ಜಾಗತಿಕವಾಗಿ ಮಾನವ ಕಳ್ಳಸಾಗಾಣೆಯ ಚಿತ್ರಕತೆ ಹೊಂದಿರುವ 'ಲವ್ ಸೋನಿಯಾ'ಗೆ ಮೊದಲು ಇಲ್ಲಿ ಚಿತ್ರೀಕರಣವಾಗಿ ನಂತರ ಲಾಸೇಂಜಲೀಸ್ ನಲ್ಲಿ ಮುಂದುವರೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com