ಸುದೀಪ್-ಪ್ರಿಯಾ ವಿಚ್ಛೇದನ: ಅರ್ಜಿ ವಿಚಾರಣೆ ಜೂನ್ 29ಕ್ಕೆ ಮುಂದೂಡಿಕೆ

ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಕೋರಿ ಇಲ್ಲಿನ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದ ಕನ್ನಡದ ಖ್ಯಾತ...
ಸುದೀಪ್-ಪ್ರಿಯಾ
ಸುದೀಪ್-ಪ್ರಿಯಾ
Updated on: 

ಬೆಂಗಳೂರು: ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದ ಕನ್ನಡದ ಖ್ಯಾತ ನಟ ಸುದೀಪ್ ಹಾಗೂ ಪ್ರಿಯಾ ಶುಕ್ರವಾರ ವಿಚಾರಣೆಗೆ ಕೋರ್ಟ್ ಗೆ ಹಾಜರಾಗಲಿಲ್ಲ.

ಹಾಗಾಗಿ ನ್ಯಾಯಾಧೀಶರು ವಿಚಾರಣೆಯನ್ನು ಜೂನ್ 29ಕ್ಕೆ ಮುಂದೂಡಿದ್ದಾರೆ.
ಸುದೀಪ್‌ ಅವರ ಪರವಾಗಿ ಅಕ್ಕ ಸುಜಾತ ಕೋರ್ಟ್‌ಗೆ ಹಾಜರಾಗಿ  ಸುದೀಪ್‌ ಅವರು  ಹಾಜರಾಗಲು  ಕಾಲಾವಕಾಶ ಕೋರಿದರು. ಈ ಹಿನ್ನಲೆಯಲ್ಲಿ ಕೌಟುಂಬಿಕ ನ್ಯಾಯಾಲಯ ವಿಚಾರಣೆಯನ್ನು ಮುಂದೂಡಿದೆ.

2001ರಲ್ಲಿ ಸುದೀಪ್ ಕೇರಳ ಮೂಲದ ನಾಯರ್ ಕುಟುಂಬದ ಪ್ರಿಯಾ ರಾಧಕೃಷ್ಣನ್ ಅವರನ್ನು ಪ್ರೀತಿಸಿ ವಿವಾಹವಾಗಿದ್ದರು.ಅವರಿಗೆ 11  ವರ್ಷದ ಸಾನ್ವಿ ಎಂಬ ಮಗಳಿದ್ದು, ಅವಳನ್ನು ಪ್ರಿಯಾ ಸುಪರ್ದಿಗೆ ನೀಡಲು ಸುದೀಪ್ ಒಪ್ಪಿದ್ದಾರೆ. ಅಲ್ಲದೆ ಅವರಿಬ್ಬರ ಜೀವನಾಂಶವಾಗಿ 11 ಕೋಟಿ ರೂಪಾಯಿ ನೀಡಲು ಸುದೀಪ್ ಒಪ್ಪಿದ್ದರೆನ್ನಲಾಗಿದೆ.

ವೈಯಕ್ತಿಕ ಭಿನ್ನಾಭಿಪ್ರಾಯಗಳಿಂದ ಅವರಿಬ್ಬರು ದೂರವಾಗಲು ನಿರ್ಧರಿಸಿ ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com