ಇನ್ನೂ ಚಿತ್ರ ನಿರ್ಮಾಣವೇ ಪೂರ್ಣಗೊಂಡಿಲ್ಲ ಆಗಲೇ 45 ಕೋಟಿ ಬಾಚಿದ "ಬಾಹುಬಲಿ-2"?

ತನ್ನ ಮೇಕಿಂಗ್ ನಿಂದಲೇ ಭಾರತೀಯ ಚಲನಚಿತ್ರೋಧ್ಯಮದಲ್ಲಿ ಭಾರಿ ಸದ್ದು ಮಾಡಿದ್ದ ಎಸ್ ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರದ ನಿರ್ಮಾಣ ಕಾರ್ಯವೇ ಇನ್ನೂ ಪೂರ್ಣಗೊಂಡಿಲ್ಲ. ಅದಾಗಲೇ ಚಿತ್ರ 45 ಕೋಟಿ ರು. ಬಾಚಿದೆ ಎಂಬ ಸುದ್ದಿಗಳು ಹೈದರಾಬಾದ್ ನ ಫಿಲ್ಮ್ ನಗರದಲ್ಲಿ ಹರಿದಾಡುತ್ತಿವೆ.
ಬಾಹುಬಲಿ-2 ಚಿತ್ರದ ಪೋಸ್ಟರ್ (ಸಂಗ್ರಹ ಚಿತ್ರ)
ಬಾಹುಬಲಿ-2 ಚಿತ್ರದ ಪೋಸ್ಟರ್ (ಸಂಗ್ರಹ ಚಿತ್ರ)

ಹೈದರಾಬಾದ್: ತನ್ನ ಮೇಕಿಂಗ್ ನಿಂದಲೇ ಭಾರತೀಯ ಚಲನಚಿತ್ರೋಧ್ಯಮದಲ್ಲಿ ಭಾರಿ ಸದ್ದು ಮಾಡಿದ್ದ ಎಸ್ ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರದ ನಿರ್ಮಾಣ ಕಾರ್ಯವೇ  ಇನ್ನೂ ಪೂರ್ಣಗೊಂಡಿಲ್ಲ. ಅದಾಗಲೇ ಚಿತ್ರ 45 ಕೋಟಿ ರು. ಬಾಚಿದೆ ಎಂಬ ಸುದ್ದಿಗಳು ಹೈದರಾಬಾದ್ ನ ಫಿಲ್ಮ್ ನಗರದಲ್ಲಿ ಹರಿದಾಡುತ್ತಿವೆ.

ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರ ಜೀವಮಾನದ ಅಪ್ರತಿಮ ಚಿತ್ರ ಎಂದೇ ಹೇಳಲಾಗುತ್ತಿರುವ ಬಾಹುಬಲಿ ಚಿತ್ರದ ಅಂತಿಮ ಮತ್ತು ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣ ಹೈದರಾಬಾದ್ ನ  ರಾಮೋಜಿ ಫಿಲ್ಮ್ ಸಿಟಿಯಲ್ಲಿ ಭರದಿಂದಸಾಗಿದ್ದು, ಚಿತ್ರದ ಕ್ಲೈಮ್ಯಾಕ್ಸ್ ಯುದ್ಧದ ಚಿತ್ರೀಕರಣದಲ್ಲಿ ಚಿತ್ರತಂಡ ಬಿಸಿಯಾಗಿದೆ. ಮತ್ತೊಂದೆಡೆ ಚಿತ್ರತಂಡ ಮೂಲಗಳ ಪ್ರಕಾರ ಚಿತ್ರ ಬಿಡುಗಡೆಗೂ  ಮುನ್ನವೇ 45 ಕೋಟಿ ರು. ಬಾಚಿದೆ ಎಂದು ಹೇಳಲಾಗುತ್ತಿದೆ.

ಚಿತ್ರದ ತಮಿಳು ಭಾಷೆಯ ಚಿತ್ರಮಂದಿರ ಪ್ರಸಾರದ ಹಕ್ಕನ್ನು ನಿರ್ಮಾಪಕ ಶೋಭು ಯರ್ಲಗಡ್ಡ ಅವರು ಮಾರಾಟ ಮಾಡಿದ್ದು, ಈ ವ್ಯವ್ಯಹಾರದಿಂದಾಗಿ 45 ಕೋಟಿ ರು.ಗಳಿಸಿದ್ದಾರಂತೆ. ಆದರೆ  ಈ ವರೆಗೂ ಚಿತ್ರತಂಡವಾಗಲಿ ಅಥವಾ ನಿರ್ಮಾಪಕರಾಗಲಿ ಯಾರಿಗೆ ಚಿತ್ರ ಪ್ರಸಾರದ ಹಕ್ಕನ್ನು ಮಾರಾಟ ಮಾಡಲಾಗಿದೆ ಎಂದು ತಿಳಿಸಿಲ್ಲ.

ಈಗಾಗಲೇ ಬಾಹುಬಲಿ-2 ಚಿತ್ರದ ಶೇ.60ರಷ್ಟು ಚಿತ್ರೀಕರಣ ಮುಕ್ತಾಯಗೊಂಡಿದ್ದು, ಎರಡನೇ ಭಾಗದ ಕ್ಲೈಮ್ಯಾಕ್ಸ್ ಯುದ್ಧದ ಚಿತ್ರೀಕರಣ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಭರದಿಂದ ಸಾಗಿದೆ. ಕಳೆದ  ಜೂನ್ 13ರಿಂದಲೇ ಕ್ಲೈಮ್ಯಾಕ್ಸ್ ಯುದ್ಧದ ಚಿತ್ರೀಕರಣ ಆರಂಭವಾಗಿದ್ದು, ನಟ ಪ್ರಭಾಸ್, ರಾಣಾ ದಗ್ಗುಬಾಟಿ ಹಾಗೂ ತಮ್ಮನ್ನಾ ಕ್ಲೈಮ್ಯಾಕ್ಸ್ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಯುದ್ಧ  ಸನ್ನಿವೇಶಗಳಿಗಾಗಿಯೇ ಅಂತಾರಾಷ್ಟ್ರೀಯ ಮಟ್ಟದ ನುರಿತ ಕಲಾವಿದರು ಕೆಲಸ ಮಾಡುತ್ತಿದ್ದು, ವಿದೇಶಿ ನುರಿತ ತಂತ್ರಜ್ಞರು ಕ್ಲೈಮ್ಯಾಕ್ಸ್ ಚಿತ್ರೀಕರಣದಲ್ಲಿ ತೊಡಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com