ಸಿನೆಮಾ ಪ್ರಚಾರಕ್ಕಾಗಿ ಪಾಕಿಸ್ತಾನಕ್ಕೆ ತೆರಳಿದ ಓಂಪುರಿ

ಖ್ಯಾತ ಭಾರತೀಯ ನಟ ಓಂಪುರಿ, ಪಾಕಿಸ್ತಾನಿ ಸಿನೆಮಾ 'ಆಕ್ಟರ್ ಇನ್ ಲಾ' ನಲ್ಲಿ ನಟಿಸಿದ್ದು, ಅದರ ಪ್ರಚಾರಕ್ಕಾಗಿ ಪಾಕಿಸ್ತಾನಕ್ಕೆ ತೆರಳಿದ್ದಾರೆ.
ಖ್ಯಾತ ಭಾರತೀಯ ನಟ ಓಂಪುರಿ
ಖ್ಯಾತ ಭಾರತೀಯ ನಟ ಓಂಪುರಿ
Updated on
ಇಸ್ಲಮಾಬಾದ್: ಖ್ಯಾತ ಭಾರತೀಯ ನಟ ಓಂಪುರಿ, ಪಾಕಿಸ್ತಾನಿ ಸಿನೆಮಾ 'ಆಕ್ಟರ್ ಇನ್ ಲಾ' ನಲ್ಲಿ ನಟಿಸಿದ್ದು, ಅದರ ಪ್ರಚಾರಕ್ಕಾಗಿ ಪಾಕಿಸ್ತಾನಕ್ಕೆ ತೆರಳಿದ್ದಾರೆ. 
ಸದ್ಯಕ್ಕೆ ಲಾಹೋರ್ ನಲ್ಲಿರುವ ಓಂಪುರಿ, ತಮ್ಮ ಪಾಕಿಸ್ತಾನಿ ಅಭಿಮಾನಿಗಳನ್ನು ಭೇಟಿ ಮಾಡಿ, ಸಿನೆಮಾ ನೋಡುವಂತೆ ಮನವಿ ಮಾಡಿದ್ದಾರೆ. ಇತರ ಪಾಕಿಸ್ತಾನ ನಗರಗಳಲ್ಲೂ ಅವರು ಸಿನೆಮಾ ಪ್ರಚಾರದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ಜಿಯೋ ಟಿವಿ ಸೋಮವಾರ ವರದಿ ಮಾಡಿದೆ. 
ನಟನಾಗುವ ಆಸೆ ಹೊತ್ತ ವ್ಯಕ್ತಿ (ಫಹದ್ ಮುಸ್ತಫಾ) ತನ್ನ ತಂದೆಯ (ಓಂಪುರಿ) ಒತ್ತಡಕ್ಕೆ ಮಣಿದು ವಕೀಲ ವೃತ್ತಿಗೆ ಇಳಿಯುವ ಕಥಾಹಂದರ ಹೊಂದಿದೆ 'ಆಕ್ಟರ್ ಇನ್ ಲಾ' ಸಿನೆಮಾ. 
ನಬೀಲ್ ಖುರೇಷಿ ನಿರ್ದೇಶಿಸಿರುವ ಈ ಉರ್ದು ಸಿನೆಮಾ ಸೆಪ್ಟೆಂಬರ್ 13 ಕ್ಕೆ ಬಿಡುಗಡೆಯಾಗಲಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com