ಕಿಚ್ಚು ಸಿನಿಮಾದಲ್ಲಿ ಡಾಕ್ಟರ್ ಆದ ಕಿಚ್ಚ

ಕಿಚ್ಚ ಸುದೀಪ್ ಯಾವಾಗಲೂ ತಮ್ಮ ಸ್ನೇಹಿತರಿಗೆ ಹೊಸಬರಿಗೆ ಸ್ಯಾಂಡಲ್ ವುಡ್ ನಲ್ಲಿ ಪ್ರೋತ್ಸಾಹ ನೀಡುತ್ತಾರೆ, ಅವರ ಬೆನ್ನು...
ಕಿಚ್ಚ ಸುದೀಪ್ ಮತ್ತು ಕಿಚ್ಚು ಚಿತ್ರದಲ್ಲಿ ಧ್ರುವ ಮತ್ತು ರಾಗಿಣಿ ದ್ವಿವೇದಿ
ಕಿಚ್ಚ ಸುದೀಪ್ ಮತ್ತು ಕಿಚ್ಚು ಚಿತ್ರದಲ್ಲಿ ಧ್ರುವ ಮತ್ತು ರಾಗಿಣಿ ದ್ವಿವೇದಿ
ಬೆಂಗಳೂರು: ಕಿಚ್ಚ ಸುದೀಪ್ ಯಾವಾಗಲೂ ತಮ್ಮ ಸ್ನೇಹಿತರಿಗೆ ಹೊಸಬರಿಗೆ ಸ್ಯಾಂಡಲ್ ವುಡ್ ನಲ್ಲಿ ಪ್ರೋತ್ಸಾಹ ನೀಡುತ್ತಾರೆ, ಅವರ ಬೆನ್ನು ತಟ್ಟುತ್ತಾರೆ ಎಂಬ ಮಾತಿದೆ. ಧ್ರುವ ಮತ್ತು ರಾಗಿಣಿ ದ್ವಿವೇದಿ ಅಭಿನಯದ ಕಿಚ್ಚು ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಲು ಸುದೀಪ್ ಒಪ್ಪಿಕೊಂಡಿದ್ದಾರಂತೆ.
ಈ ಚಿತ್ರವನ್ನು ನಿರ್ದೇಶಿಸುತ್ತಿರುವವರು ಪ್ರದೀಪ್ ರಾಜ್. ಚಿತ್ರದಲ್ಲಿ ಅವರು ವೈದ್ಯನ ಪಾತ್ರ ಮಾಡಲಿದ್ದಾರೆ. ತಮ್ಮ ಹೆಬ್ಬುಲಿ ಚಿತ್ರದ ಚಿತ್ರೀಕರಣದ ಮಧ್ಯೆ ಬಿಡುವು ಮಾಡಿಕೊಂಡು ಎರಡು ದಿನ ರಾಗಿಣಿ ದ್ವಿವೇದಿ ಮತ್ತು ಧ್ರುವ ಜೊತೆ ಕಿಚ್ಚು ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. 
''ಸುದೀಪ್ ಅವರು ಕಾಣಿಸಿಕೊಳ್ಳುವುದು ನಮ್ಮ ಚಿತ್ರಕ್ಕೆ ಪ್ಲಸ್ ಪಾಯಿಂಟ್. ತಮ್ಮ ಸ್ನೇಹಿತ ಧ್ರುವಗೋಸ್ಕರ ನಾವು ಪ್ರಸ್ತಾಪ ಮುಂದಿಟ್ಟಾಗ ಎರಡು ಯೋಚನೆ ಮಾಡದೆ ಸುದೀಪ್ ಒಪ್ಪಿಕೊಂಡರು.'' ಎನ್ನುತ್ತಾರೆ ಪ್ರದೀಪ್.
ಕಿಚ್ಚು ಚಿತ್ರದಲ್ಲಿ ಗ್ಲಾಮರ್ ರಹಿತವಾಗಿ ಕಾಣಿಸಿಕೊಳ್ಳಲಿರುವ ರಾಗಿಣಿ ದ್ವಿವೇದಿ ಕಾಫಿ ಎಸ್ಟೇಟ್ ನಲ್ಲಿ ಕೆಲಸ ಮಾಡುವ ಕಾರ್ಮಿಕಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ವಾಕ್ ಮತ್ತು ಶ್ರವಣ ದೋಷವಿರುವ ಪಾತ್ರವನ್ನು ಧ್ರುವ ಮಾಡುತ್ತಿದ್ದಾರೆ.
ಚಿತ್ರಕ್ಕಾಗಿ ರಾಗಿಣಿ ಸಂಕೇತ ಭಾಷೆಯನ್ನು ಕಲಿತುಕೊಂಡಿದ್ದಾರೆ. ಚಿತ್ರದಲ್ಲಿ ಸಾಯಿ ಕುಮಾರ್ ಮತ್ತು ಸುಚೇಂದ್ರ ಪ್ರಸಾದ್ ಕೂಡ ಪಾತ್ರ ನಿರ್ವಹಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com