ಬುಕ್ ಮೈ ಷೋ. ಕಾಮ್ ಅಂತರ್ಜಾಲ ತಾಣದಲ್ಲಿ 'ಟಗರು' ಸಿನೆಮಾವನ್ನು ೨೦೧೭ ರ ಅತಿ ಹೆಚ್ಚು ನಿರೀಕ್ಷಿತ ದಕ್ಷಿಣ ಭಾರತ ಸಿನೆಮಾ ಎಂದು ಆಯ್ಕೆ ಮಾಡಲಾಗಿದೆ. ಈ ತಾಣ ಪಟ್ಟಿ ಮಾಡಿರುವ ಸಿನೆಮಾಗಳಲ್ಲಿ ಎಸ್ ಎಸ್ ರಾಜಮೌಳಿ ನಿರ್ದೇಶನದ 'ಬಾಹುಬಲಿ ೨', ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ನಟಿಸಿರುವ '೨.೦', ತೆಲುಗು ನಟ ಚಿರಂಜೀವಿಯವರ ೧೫೦ ನೆಯ ಚಿತ್ರ 'ಖೈದಿ ನಂ. ೧೫೦'. ಪವನ್ ಕಲ್ಯಾಣ್ ಅವರ 'ಕಾಟಮರಾಯುಡು', ಕಮಲ್ ಹಾಸನ್ ಅವರ 'ವಿಶ್ವರೂಪಂ ೨' ಮತ್ತು ಮೋಹನ್ ಲಾಲ್ ಅವರ 'ಬಿಯಾಂಡ್ ಬ್ರದರ್ಸ್' ಕೂಡ ಸೇರಿದೆ. ಈ ಪಟ್ಟಿಯಲ್ಲಿ ಪುನೀತ್ ರಾಜಕುಮಾರ್ ಅವರ 'ರಾಜಕುಮಾರ' ಮತ್ತು ಯಶ್ ಅವರ 'ಕೆಜಿಎಫ್' ಕೂಡ ಸೇರಿರುವುದು ವಿಶೇಷ.