ಸಂತೋಷ್ ಆನಂದಾರಮ್ 'ರಾಜಕುಮಾರ' ಪುನೀತ್ ಜೊತೆ ಪ್ರಿಯಾ ಆನಂದ್

ಚೊಚ್ಚಲ ನಿರ್ದೇಶನದ ಚಿತ್ರ 'ಮಿ ಅಂಡ್ ಮಿಸಸ್ ರಾಮಾಚಾರಿ' ಸಿನೆಮಾದಲ್ಲೇ ಮೋಡಿ ಮಾಡಿದ್ದ ನಿರ್ದೇಶಕ ಸಂತೋಷ್ ಆನಂದರಾಮ್ ಮುಂದಿನ ಚಿತ್ರವಾಗಿ
ನಟಿ ಪ್ರಿಯಾ ಆನಂದ್
ನಟಿ ಪ್ರಿಯಾ ಆನಂದ್
Updated on

ಬೆಂಗಳೂರು: ಚೊಚ್ಚಲ ನಿರ್ದೇಶನದ ಚಿತ್ರ 'ಮಿ ಅಂಡ್ ಮಿಸಸ್ ರಾಮಾಚಾರಿ' ಸಿನೆಮಾದಲ್ಲೇ ಮೋಡಿ ಮಾಡಿದ್ದ ನಿರ್ದೇಶಕ ಸಂತೋಷ್ ಆನಂದರಾಮ್ ಮುಂದಿನ ಚಿತ್ರವಾಗಿ ಪುನೀತ್ ರಾಜಕುಮಾರ ಅವರ 'ರಾಜಕುಮಾರ' ಚಿತ್ರದ ಘೋಷಣೆ ಮಾಡಿದ್ದರು. ಅದರ ಬಗ್ಗೆ ಪ್ರೇಕ್ಷಕರಲ್ಲಿ ಬಹಳ ಕುತೂಹಲ ಮೂಡಿತ್ತು.

ಇತ್ತೀಚೆಗಷ್ಟೇ ವಿದೇಶಿ ಪ್ರವಾಸ ಮುಗಿಸಿ, ಚಿತ್ರೀಕರಣಕ್ಕೆ ಪ್ರದೇಶಗಳನ್ನು ಹುಡುಕಿ ಬಂದಿರುವ ನಿರ್ದೇಶಕ ಸಂತೋಷ್, ಪುನೀತ್ ಎದುರು ನಟಿಸಲು ಪರಭಾಷಾ ನಟಿ ಪ್ರಿಯಾ ಆನಂದ್ ಅವರನ್ನು ಅಂತಿಮಗೊಳಿಸಿದ್ದಾರೆ. ಇದು ಪ್ರಿಯಾಗೆ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆಯಾಗಲಿದೆ.  

ನಿರ್ಮಾಪಕ ಕೋಟಿ ರಾಮು, ತಾವು ಹೊಂದಿದ್ದ 'ರಾಜಕುಮಾರ್' ಶೀರ್ಷಿಕೆಯನ್ನು ಪುನೀತ್ ಚಿತ್ರಕ್ಕಾಗಿ ಬಿಟ್ಟುಕೊಟ್ಟಿದ್ದರು. ಮಾರ್ಚ್ ಮಧ್ಯಭಾಗದಲ್ಲಿ ಚಿತ್ರದ ಮುಹೂರ್ತ ಮತ್ತು ಚಿತ್ರೀಕರಣ ಪ್ರಾರಂಭವಾಗಲಿದೆಯಂತೆ. ಕಥೆ ಮತ್ತು ಚಿತ್ರಕಥೆಯನ್ನು ಸಂತೋಷ್ ಅವರೇ ಸಿದ್ಧಪಡಿಸಿದ್ದು, ವೆಂಕಟೇಶ್ ಛಾಯಾಗ್ರಹಣ ಮತ್ತು ಹರಿಕೃಷ್ಣ ಅವರ ಸಂಗೀತ ಇದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com