ಆಸ್ಕರ್ ಕೆಂಪು ಹಾಸಿನ ಮೇಲೆ ಮಿಂಚಿದ ಪ್ರಿಯಾಂಕಾ ಚೋಪ್ರಾ

೮೮ನೆ ಅಕಾಡೆಮಿ ಪ್ರಶಸ್ತಿಗಳನ್ನು ಅರ್ಪಿಸಿದವರಲ್ಲಿ ಒಬ್ಬರಾದ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಲೆಬನೀಸ್ ವಿನ್ಯಾಸಕಾರ ಜುಹೇರ್ ಮುರಾದ್ ವಿನ್ಯಾಸದ ಉಡುಗೆ
ಆಸ್ಕರ್ ಕೆಂಪು ಹಾಸಿನ ಮೇಲೆ ಪ್ರಿಯಾಂಕಾ ಚೋಪ್ರಾ
ಆಸ್ಕರ್ ಕೆಂಪು ಹಾಸಿನ ಮೇಲೆ ಪ್ರಿಯಾಂಕಾ ಚೋಪ್ರಾ
Updated on

ಲಾಸೇಂಜಲೀಸ್: ೮೮ನೆ ಅಕಾಡೆಮಿ ಪ್ರಶಸ್ತಿಗಳನ್ನು ಅರ್ಪಿಸಿದವರಲ್ಲಿ ಒಬ್ಬರಾದ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಲೆಬನೀಸ್ ವಿನ್ಯಾಸಕಾರ ಜುಹೇರ್ ಮುರಾದ್ ವಿನ್ಯಾಸದ ಉಡುಗೆ ತೊಟ್ಟು ರೆಡ್ ಕಾರ್ಪೆಟ್ ಮೇಲೆ ನಡೆದು ಎಲ್ಲರ ಗಮನ ಸೆಳೆದಿದ್ದಾರೆ.

ಅಮೇರಿಕಾ ಟಿವಿ ಧಾರಾವಾಹಿ 'ಕ್ವಾಂಟಿಕೋ'ದಲ್ಲಿ ನಟಿಸಿ ಅಂತರಾಷ್ಟ್ರೀಯ ಖ್ಯಾತಿ ಗಳಿಸಿದ ಪ್ರಿಯಾಂಕಾ ಚೋಪ್ರಾ ಬಿಳಿ ರೇಷ್ಮೆಯ ಮೆರ್ಮೇಡ್ ಬಟ್ಟೆ ತೊಟ್ಟಿದ್ದ ಪ್ರಿಯಾಂಕ ಡಾಲ್ಬಿ ಥಿಯೇಟರ್ ನತ್ತ ಕೆಂಪು ಹಾಸಿನ ಮೇಲೆ ನಡೆದಾಗ ಎಲ್ಲರ ಕಣ್ಮನ ಸೆಳೆದಿದ್ದಾರೆ.

ರಾಷ್ಟ್ರಪ್ರಶಸ್ತಿ ವಿಜೇತ ನಟಿ ವಜ್ರದ ಜುಮುಕಿಯನ್ನು ಧರಿಸಿ, ಕೂದಲನ್ನು ಹಿಂದಕ್ಕೆಕಟ್ಟಿಕೊಂಡು, ಸಾಮಾನ್ಯ ಮೇಕಪ್ ಧರಿಸಿ ವಿಶಿಷ್ಟವಾಗಿ ಕಾಣಿಸಿಕೊಂಡಿದ್ದಾರೆ.

"ವಜ್ರ ಯುವತಿಯರ ನೆಚ್ಚಿನ ಗೆಳೆಯರು" ಎಂದು ಕೂಡ ಅವರು ಕಾರ್ಯಕ್ರಮಕ್ಕೂ ಮುಂಚಿತವಾಗಿ ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com