12 ವರ್ಷಗಳ ನಂತರ ಒಂದುಗೂಡಲಿರುವ 'ಫ್ರೆಂಡ್ಸ್'

ಅಮೇರಿಕಾ ಸಿಟ್ಕಾಮ್ (ಧಾರವಾಹಿ) 'ಫ್ರೆಂಡ್ಸ್' ಅಭಿಮಾನಿಗಳಿಗೆ ಸಿಹಿ ಸುದ್ದಿ. ಈ ಧಾರಾವಾಹಿಯ ಖ್ಯಾತ ನಟರೆಲ್ಲಾ ಎನ್ ಬಿ ಸಿಯ ಜನಪ್ರಿಯ ಟಿ ವಿ ಕಾರ್ಯಕ್ರಮದಲ್ಲಿ
'ಫ್ರೆಂಡ್ಸ್' ಧಾರಾವಾಹಿಯ ನಟರು
'ಫ್ರೆಂಡ್ಸ್' ಧಾರಾವಾಹಿಯ ನಟರು
Updated on

ಜೋಹ್ಯಾನಸ್ ಬರ್ಗ್: ಅಮೇರಿಕಾ ಸಿಟ್ಕಾಮ್ (ಧಾರವಾಹಿ) 'ಫ್ರೆಂಡ್ಸ್' ಅಭಿಮಾನಿಗಳಿಗೆ ಸಿಹಿ ಸುದ್ದಿ. ಈ ಧಾರಾವಾಹಿಯ ಖ್ಯಾತ ನಟರೆಲ್ಲಾ ಎನ್ ಬಿ ಸಿಯ ಜನಪ್ರಿಯ ಟಿ ವಿ ಕಾರ್ಯಕ್ರಮದಲ್ಲಿ ಒಂದಾಗಲಿದ್ದಾರೆ. ಈ ಧಾರಾವಾಹಿಯ ಕೆಲವು ಕಂತುಗಳನ್ನು ನಿರ್ದೇಶಿಸಿದ್ದ ಜೇಮ್ಸ್ ಬರ್ರೋಸ್ ಅವರನ್ನು ಗೌರವಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

೧೦ ಭಾಗಗಳಲ್ಲಿ ಪ್ರಸಾರವಾಗಿದ್ದ ಈ ಧಾರಾವಾಹಿಯ ೧೫ ಕಂತುಗಳನ್ನು ಬರ್ರೋಸ್ ನಿರ್ದೇಶಿಸಿದ್ದರು.

ಈ ಧಾರಾವಾಹಿಯ ಎಲ್ಲ ಪ್ರಮುಖ ನಟರಾದ ಮ್ಯಾತ್ಯು ಪೆರ್ರಿ, ಜೆನ್ನಿಫರ್ ಅನಿಸ್ತನ್, ಡೇವಿಡ್ ಶ್ವಿಮ್ಮರ್, ಕೊರ್ಟ್ನಿ ಕಾಕ್ಸ್, ಮೆಟ್ ಲೆಬ್ಲಾಂಕ್ ಮತ್ತು ಲಿಸಾ ಕುಡ್ರೊ ಫೆಬ್ರವರಿ ೨೧ ರಂದು ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಒಂದಾಗಲಿದ್ದಾರೆ.

ಎಲ್ಲಾ ಆರು ಜನ ಒಂದೇ ಸಮಯಕ್ಕೆ ಒಂದೇ ಕೊಠಡಿಯಲ್ಲಿ ಸೇರುತ್ತಾರೆಂಬ ಭರವಸೆ ಇದೆ ಎಂದಿದ್ದಾರೆ ಎನ್ ಬಿ ಸಿ ಮುಖ್ಯಸ್ಥ ಬಾಬ್ ಗ್ರೀನ್ ಬ್ಲಾಟ್.

೧೯೯೪ರ ಸೆಪ್ಟಂಬರ್ ೨೨ ರಂದು 'ಫ್ರೆಂಡ್ಸ್' ಧಾರಾವಾಹಿಯ ಮೊದಲ ಕಂತನ್ನು ಪ್ರಸಾರ ಮಾಡಲಾಗಿತ್ತು ನಂತರ ಜನಪ್ರಿಯತೆಯ ಉತ್ತುಂಗಕ್ಕೇರಿದ್ದ ಈ ಧಾರಾವಾಹಿ ಮೇ ೬ ೨೦೦೪ ಕ್ಕೆ ಕೊನೆಯಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com