ಬಿಗ್ ಬಾಸ್ ಫೈನಲ್ ಪ್ರವೇಶಿಸಿದ ಪೂಜಾ ಗಾಂಧಿ ಮತ್ತು ಆನಂದ್

ಬಿಗ್‌ಬಾಸ್‌ ಸೀಸನ್ 3 ಸ್ಪರ್ಧಿಗಳಾದ ಮಾಸ್ಟರ್ ಆನಂದ್ ಮತ್ತು ಪೂಜಾಗಾಂಧಿ ಫೈನಲ್ ಪ್ರವೇಶಿಸಿದ್ದಾರೆ. ...
ಪೂಜಾ ಗಾಂಧಿ ಮತ್ತು ಮಾಸ್ಟರ್ ಆನಂದ್
ಪೂಜಾ ಗಾಂಧಿ ಮತ್ತು ಮಾಸ್ಟರ್ ಆನಂದ್

ಬಿಗ್‌ಬಾಸ್‌ ಸೀಸನ್ 3 ಸ್ಪರ್ಧಿಗಳಾದ ಮಾಸ್ಟರ್ ಆನಂದ್ ಮತ್ತು ಪೂಜಾಗಾಂಧಿ ಫೈನಲ್ ಪ್ರವೇಶಿಸಿದ್ದಾರೆ. ನಿನ್ನೆ ನಡೆದ ಕ್ಯಾಪ್ಟನ್ ಆಯ್ಕೆಯಲ್ಲಿ ಪೂಜಾಗೆ ಹೆಚ್ಚಿನ ಓಟ್ ಬಂದಿತ್ತು. ಹೀಗಾಗಿ ಈ ವಾರ ಮೊದಲ ಬಾರಿಗೆ ಪೂಜಾ ಕ್ಯಾಪ್ಟನ್ ಆಗಿ ನೇಮಕವಾದರು. ಅದೇ ಅವರಿಗೆ ವರದಾನವಾಯಿತು.

ಒಂದು ಬಾರಿ ಎಲಿಮಿನೇಟ್  ಆಗಿ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದ ಪೂಜಾ ಗಾಂಧಿ ಸೀಕ್ರೇಟ್‌ ರೂಂಗೆ ಸೇರಿಕೊಂಡು ಮರಳಿ ಮನೆಗೆ ಎಂಟ್ರಿ ನೀಡಿದ್ದರು. ಇದೇ ಅದೃಷ್ಟದ ಬಲದಿಂದ ಪೂಜಾ ಫೈನಲ್‌ಗೆ ಪ್ರವೇಶ ಪಡೆದಿದ್ದಾರೆ.

ಪೂಜಾ ಗಾಂಧಿ ಮನೆಯ ಕ್ಯಾಪ್ಟನ್ ಆದ ಕಾರಣ ಅವರನ್ನು ಎಲಿಮಿನೇಶನ್‌ಗೆ ನಾಮಿನೇಟ್ ಮಾಡುವಂತಿರಲಿಲ್ಲ. ಹೀಗಾಗಿ ಬಿಗ್‌ಬಾಸ್ ಮನೆಯ ಪ್ರಥಮ ಸ್ಫರ್ಧಿಯಾಗಿ ಪೂಜಾಗಾಂಧಿ ಫೈನಲ್‌ಗೆ ಹೆಜ್ಜೆ ಇಟ್ಟಿದ್ದಾರೆ.

ಬಿಗ್‌ಬಾಸ್‌ ಆರಂಭವಾದಾಗಿನಿಂದಲೂ ಉತ್ತಮ ಸ್ಪರ್ಧೆ ನೀಡಿ ಎಚ್ಚರಿಕೆಯಿಂದ ಆಡುತ್ತಾ ಬಂದಿದ್ದ ಆನಂದ್ ನಿನ್ನೆ ನಾಮಿನೇಟ್‌ ಆಗದ ಕಾರಣ ಎರಡನೇ ಸ್ಪರ್ಧಿಯಾಗಿ ಬಿಗ್‌ಬಾಸ್‌ ಫೈನಲ್‌ಗೆ ಆಯ್ಕೆಯಾಗಿದ್ದಾರೆ. ಹೀಗಾಗಿ ಮುಂದಿನ ಶನಿವಾರ ನಡೆಯುವ ಎಲಿಮಿನೇಶನ್‌ ಪ್ರಕ್ರಿಯೆಯಿಂದ ಪೂಜಾ ಹಾಗೂ ಆನಂದ್‌ ಸೇಫ್ ಆಗಿದ್ದಾರೆ.

ಮನೆಯ ಸದಸ್ಯರ ಓಟಿಂಗ್‌ ಮೇರೆಗೆ ಮುಂದಿನ ವಾರಕ್ಕೆ ರೆಹಮಾನ್, ಅಯ್ಯಪ್ಪ, ಚಂದನ್ ಹಾಗೂ ಕ್ಯಾಪ್ಟನ್ ಆಯ್ಕೆಯ ಪ್ರಕಾರ ಶೃತಿ ನಾಮಿನೇಟ್ ಆಗಿದ್ದಾರೆ. ಇನ್ನು ನಾಮಿನೇಟ್ ಆಗಿದ್ದಕ್ಕೆ ಶೃತಿ ತುಂಬಾ ಅಪ್ ಸೆಟ್ ಆಗಿದ್ದಾರೆ. ಈ ನಾಲ್ವರಲ್ಲಿ ಯಾರು ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗುತ್ತಾರೋ ಕಾದು ನೋಡಬೇಕು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com