

ಬೆಂಗಳೂರು: ನಾಗಶೇಖರ್ ನಿರ್ದೇಶನದ 'ಮಾಸ್ತಿ ಗುಡಿ' ಸಿನೆಮಾದಲ್ಲಿ ನಟ ವಿಜಯ್ ೭೦ ವರ್ಷದ ಮುದುಕನಾಗಿಯೂ ಕಾಣಿಸಿಕೊಳ್ಳುತ್ತಿರುವುದು ವಿಶೇಷ. "ನಾನು ೧೮ ರಿಂದ ೩೩ ರಿಂದ ೭೦ ವರ್ಷದವರೆಗೂ ಬೆಳೆಯುತ್ತೇನೆ" ಎಂದಿದ್ದಾರೆ ಈ ಸಿನೆಮಾಗಿ ಗಡ್ಡ ಬೆಳೆಸಿಕೊಂಡಿರುವ ವಿಜಯ್.
ಈಗ ತಮ್ಮ ದೇಹದ ತೂಕ ಇಳಿಸಿಕೊಳ್ಳಲು ೨೦ ದಿನ ಸಮಯಾವಕಾಶವಿದೆಯಂತೆ. "ನಾನೀಗ ವೆಯ್ಟ್ ಲಿಫ್ಟಿಂಗ್ ಮಾಡುವ ಹಾಗಿಲ್ಲ. ದಿನಕ್ಕೆ ೧೦-೧೨ ಕಿಮೀ ಓಡಬೇಕಾಗಿದೆ" ಎನ್ನುತ್ತಾರೆ.
ಇದು ಹುಲಿಗಳನ್ನು ಸಂರಕ್ಷಿಸುವ ವಿಷಯದ ಸಿನೆಮಾ ಆಗಿರುವುದರಿಂದ ವಿಜಯ್ ಅವರಿಗೆ ಸಿನೆಮಾ ಬಗ್ಗೆ ವಿಶೇಷ ಪ್ರೀತಿಯಂತೆ. "ಮಾಸ್ತಿ ಗುಡಿ ಮಕ್ಕಳಿಗೂ ಒಳ್ಳೆಯ ಸಿನೆಮಾ ಆಗಬೇಕು. ಇದನ್ನು ಅತ್ಯುತ್ತಮವಾಗಿ ಮಾಡಲು ಬಹಳ ಪ್ರಯತ್ನಿಸುತ್ತಿದ್ದೇವೆ. ಇದು ಸಂಪೂರ್ಣಗೊಳ್ಳುವವರೆಗೂ ಬೇರೆ ಇನ್ಯಾವ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದಿಲ್ಲ" ಎಂದಿದ್ದಾರೆ ವಿಜಯ್.
ವಿಜಯ್ ೭೦ ವರ್ಷದವನ ಪಾತ್ರದಿಂದ ಸಿನೆಮಾ ಪ್ರಾರಂಭವಾಗಿ ಹಿಮ್ಮುಖವಾಗಿ ನಡೆಯಲಿದೆ ಎನ್ನುತ್ತಾರೆ ನಿರ್ದೇಶಕ. ವಿಜಯ್ ಅವರಿಗೆ ಈ ಮೇಕಪ್ ಮಾಡಲು ನಾಲ್ಕು ಘಂಟೆಗಳು ಹಿಡಿಯಿತಂತೆ. ಇದು ಸತ್ಯ ಕಥೆ ಆಧಾರಿತ ಸಿನೆಮಾ ಎನ್ನುತ್ತಾರೆ ನಾಗಶೇಖರ್.