ಬಾಹುಬಲಿ-2 ಪೂರ್ಣವಾದ ಕೂಡಲೇ ಪ್ರಭಾಸ್ ವಿವಾಹ

ಬಾಹುಬಲಿ 2 ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗೋವರೆಗೆ ಪ್ರಭಾಸ್‌ಗೆ ಮದುವೆ ಇಲ್ಲ. ಆದರೆ ಬಾಹುಬಲಿ 2 ಮುಗಿಯುತ್ತಿದ್ದಂತೆ ಪ್ರಭಾಸ್ ಮದುವೆಯಾಗಲಿದ್ದಾರೆ ಎಂದು ಪ್ರಭಾಸ್ ..
ನಟ ಪ್ರಭಾಸ್
ನಟ ಪ್ರಭಾಸ್

ಬಾಹುಬಲಿ 2 ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗೋವರೆಗೆ ಪ್ರಭಾಸ್‌ಗೆ ಮದುವೆ ಇಲ್ಲ. ಆದರೆ ಬಾಹುಬಲಿ 2 ಮುಗಿಯುತ್ತಿದ್ದಂತೆ ಪ್ರಭಾಸ್ ಮದುವೆಯಾಗಲಿದ್ದಾರೆ ಎಂದು ಪ್ರಭಾಸ್ ದೊಡ್ಡಪ್ಪ ಕೃಷ್ಣಂ ರಾಜು ಹೇಳಿದ್ದಾರೆ.

ರಾಜಮೌಳಿ ನಿರ್ದೇಶನದ 'ಬಾಹುಬಲಿ' ಚಿತ್ರಕ್ಕಾಗಿ ಮದುವೆಯನ್ನು ಮುಂದೂಡಿದವರು ಟಾಲಿವುಡ್ ಹೀರೋ ಪ್ರಭಾಸ್‌. ಬಾಹುಬಲಿ 2  ಚಿತ್ರದ ಶೂಟಿಂಗ್ ಆರಂಭವಾಗಿದೆ. ಮೂಲಗಳ ಪ್ರಕಾರ ಪ್ರಭಾಸ್‌ ಇದೇ ವರ್ಷ ಹೊಸ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ ಎಂದು ಹೇಳಲಾಗುತ್ತಿದೆ.

ಪ್ರಭಾಸ್‌ ದೊಡ್ಡಪ್ಪ, ಹಿರಿಯ ನಟ ಕೃಷ್ಣಂರಾಜು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಈ ವಿಷಯ ತಿಳಿಸಿದ್ದಾರೆ. ಪ್ರಭಾಸ್‌ ಫ್ಯಾಮಿಲಿ ಈಗಾಗಲೇ ವಧುವಿನ ಹುಡುಕಾಟದಲ್ಲಿದ್ದು, ಈ ವರ್ಷ ಪ್ರಭಾಸ್‌ ಬ್ಯಾಚಲರ್‌ ಲೈಫ್‌ನಿಂದ ಮುಕ್ತಿ ಪಡೆಯುತ್ತಾರೆ ಎಂಬ ಸುಳಿವನ್ನು ಬಿಚ್ಚಿಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com