

ಮಂಗಳೂರು: ಸ್ಯಾಂಡಲ್ ವುಡ್ ನಟ ದರ್ಶನ್ ಅಭಿನಯಿಸಿದ ವಿರಾಟ್ ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ತಾಂತ್ರಿಕ ದೋಷದಿಂದಾಗಿ ಮಂಗಳೂರಿನಲ್ಲಿ ಚಿತ್ರ ಪ್ರದರ್ಶನಗೊಂಡಿಲ್ಲ.
ಆನ್‌ಲೈನ್ ಮೂಲಕ ವಿರಾಟ್ ಚಿತ್ರದ ಕಂಟೆಂಟ್ ಚಿತ್ರಮಂದಿರಕ್ಕೆ ತಲುಪಬೇಕಿತ್ತು. ಆದರೆ ತಾಂತ್ರಿಕ ದೋಷದಿಂದಾಗಿ ಈ ಸಮಸ್ಯೆ ಎದುರಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಒಂದೆಂಡೆ ಪೇಮೆಂಟ್ ವಿಳಂಬದಿಂದಾಗಿ ಈ ತೊಂದರೆಯಾಗಿರಬಹುದು ಎಂಬ ಮಾತು ಕೇಳಿ ಬರುತ್ತಿದೆ.