ಗಂಡು ಮಗುವಿಗೆ ತಾಯಿಯಾಗಲಿದ್ದಾರೆ ಕರೀನಾ: ಲಿಂಗ ಪತ್ತೆ ವದಂತಿ ತಳ್ಳಿ ಹಾಕಿದ ಸೈಫೀನಾ

ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸೈಫೀನಾ ದಂಪತಿ ಈಗಾಗಲೇ ತಮ್ಮ ಮಗುವಿನ ಲಿಂಗ ಪತ್ತೆಯನ್ನು ಮಾಡಿದ್ದು, ಗಂಡುವಿಗೆ ಕರೀನಾ ಜನ್ಮ ನೀಡಲಿದ್ದಾರೆಂಬ ವರದಿಯನ್ನು...
ಕರೀನಾ ಕಪೂರ್ ಹಾಗೂ ಸೈಫ್ ಅಲಿ ಖಾನ್
ಕರೀನಾ ಕಪೂರ್ ಹಾಗೂ ಸೈಫ್ ಅಲಿ ಖಾನ್

ನವದೆಹಲಿ: ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸೈಫೀನಾ ದಂಪತಿ ಈಗಾಗಲೇ ತಮ್ಮ ಮಗುವಿನ ಲಿಂಗ ಪತ್ತೆಯನ್ನು ಮಾಡಿದ್ದು, ಗಂಡುವಿಗೆ ಕರೀನಾ ಜನ್ಮ ನೀಡಲಿದ್ದಾರೆಂಬ ವರದಿಯನ್ನು ಸೈಫೀನಾ ದಂಪತಿ ತಿರಸ್ಕರಿಸಿದ್ದಾರೆ.

ವದಂತಿ ಕುರಿತಂತೆ ಖಾಸಗಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಕರೀನಾ ಕಪೂರ್ ಅವರ ವಕ್ತಾರೆ, ವರದಿಗಳಿಗೆ ಯಾವುದೇ ಆಧಾರವಿಲ್ಲ. ಇಂತಹ ಸುದ್ದಿಯನ್ನು ದಂಪತಿಗಳು ತಿರಸ್ಕರಿಸಿದ್ದಾರೆ. ಮಗುವಿನ ಲಿಂಗ ಪತ್ತೆ ಕುರಿತಂತೆ ಲಂಡನ್ ವೈದ್ಯರೊಂದಿಗೆ ಯಾವುದೇ ರೀತಿಯ ಚರ್ಚೆಗಳು ನಡೆದಿಲ್ಲ ಎಂದು ಸ್ಫಷ್ಟನೆ ನೀಡಿದ್ದಾರೆ.

ಕರೀನಾ ಹಾಗೂ ಸೈಫ್ ಇಬ್ಬರೂ ವಯಸ್ಕರಾಗಿದ್ದಾರೆ. ಒಬ್ಬರ ಖಾಸಗಿ ವಿಚಾರವನ್ನು ಅನಗತ್ಯವಾಗಿ ದೊಡ್ಡ ವಿಚಾರ ಮಾಡದಂತೆ ಜನರ ಬಳಿ ಮನವಿ ಮಾಡಿಕೊಳ್ಳುತ್ತೇವೆಂದು ಹೇಳಿದ್ದಾರೆ.

ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಕರೀನಾ ಕಪೂರ್ ಅವರು ಚಿಕಿತ್ಸೆ ಪಡೆಯುವ ಸಲುವಾಗಿ ಕಳೆದ ತಿಂಗಳು ಲಂಡನ್ ಗೆ ತೆರಳಿದ್ದರು. ಈ ವೇಳೆ ಲಿಂಗ ಪತ್ತೆ ಪರೀಕ್ಷೆ ಮಾಡಿಕೊಂಡಿದ್ದು, ಕರೀನಾ ಅವರು ಗಂಡುವಿಗೆ ಜನ್ಮ ನೀಡಲಿದ್ದಾರೆಂದು ಹೇಳಲಾಗುತ್ತಿತ್ತು. ಭಾರತದಲ್ಲಿ ಭ್ರೂಣ ಲಿಂಗ ಪತ್ತೆ ಪರೀಕ್ಷೆಗೆ ನಿಷೇಧ ಹೇರಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com