1st ರ್ಯಾಂಕ್ ಅಲ್ಲ.. 2nd ರ್ಯಾಂಕ್ ಅಲ್ಲ.. 'ರಾಜು ರಂಗಿತರಂಗ'!

ಗುರುನಂದನ್ ಮತ್ತು ಅವಂತಿಕಾ ಶೆಟ್ಟಿ ನಟಿಸಿರುವ ನರೇಶ್ ಕುಮಾರ್ ನಿರ್ದೇಶನದ ಮುಂದಿನ ಚಿತ್ರದ ಹೆಸರು 'ರಾಜು ರಂಗಿತರಂಗ' ಮತ್ತು ಅಡಿ ಶೀರ್ಷಿಕೆ '1st ರ್ಯಾಂಕ್ ಅಲ್ಲ.. 2nd ರ್ಯಾಂಕ್ ಅಲ್ಲ'.
ಅವಂತಿಕಾ ಶೆಟ್ಟಿ
ಅವಂತಿಕಾ ಶೆಟ್ಟಿ
Updated on
ಬೆಂಗಳೂರು: ಗುರುನಂದನ್ ಮತ್ತು ಅವಂತಿಕಾ ಶೆಟ್ಟಿ ನಟಿಸಿರುವ ನರೇಶ್ ಕುಮಾರ್ ನಿರ್ದೇಶನದ ಮುಂದಿನ ಚಿತ್ರದ ಹೆಸರು 'ರಾಜು ರಂಗಿತರಂಗ' ಮತ್ತು ಅಡಿ ಶೀರ್ಷಿಕೆ '1st ರ್ಯಾಂಕ್ ಅಲ್ಲ.. 2nd ರ್ಯಾಂಕ್ ಅಲ್ಲ'.
ಕೆ ಎ ಸುರೇಶ್ ನಿರ್ಮಾಣದ ಈ ಸಿನೆಮಾಗೆ ಬಹು ಕಾಲದವರೆಗೆ ಹೆಸರಿಡಲಾಗಿರಲಿಲ್ಲ ಮತ್ತು ಈಗ ಹಲವು ಆಯ್ಕೆಗಳನ್ನು ಅಳೆದು ತೂಗಿ 'ರಾಜು ರಂಗಿತರಂಗ' ಅಂತಿಮಗೊಳಿಸಲಾಗಿದೆ. 
ವಿಶೇಷವೆಂದರೆ ಈ ಶೀರ್ಷಿಕೆಯಲ್ಲಿರುವ ಎರಡು ಸಿನೆಮಾಗಳು ಮುಖ್ಯನಟರು ಈ ಸಿನೆಮಾದಲ್ಲಿ ಒಂದಾಗಿದ್ದಾರೆ. ಸೂಪರ್ ಹಿಟ್ ಸಿನೆಮಾಗಳಾದ 'ರಂಗಿತರಂಗ'ದ ಅವಂತಿಕಾ ಶೆಟ್ಟಿ ಮತ್ತು '1st ರ್ಯಾಂಕ್ ರಾಜು' ಸಿನೆಮಾದ ಗುರುನಂದನ್ ಈ ಸಿನೆಮಾದ ಮೂಲಕ ಒಂದಾಗಿದ್ದಾರೆ. 
'1st ರ್ಯಾಂಕ್ ರಾಜು' ಮೂಲಕ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ ಗುರುನಂದನ್ ಸದ್ಯಕ್ಕೆ ಬಹುಬೇಡಿಕೆಯುಳ್ಳ ನಟನಾಗಿದ್ದು ಹಲವಾರು ಯೋಜನೆಗಳಲ್ಲಿ ಬ್ಯುಸಿಯಾಗಿದ್ದಾರೆ. ಅವಂತಿಕಾ ಶೆಟ್ಟಿ ಕೂಡ ಹಿಂದೆ ಬೀಳದೆ, ಅವರು ನಟಿಸಿರುವ 'ಕಲ್ಪನಾ-2' ಕೂಡ ಚಿತ್ರಮಂದಿರಗಳಲ್ಲಿ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. 
ಈ ಸಿನೆಮಾದ ಚಿತ್ರೀಕರಣ ಊಟಿಯಲ್ಲಿ ನಡೆಯುತ್ತಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com