ಈ ಹಿಂದೆ 'ಲಿಂಗ' ಚಿತ್ರದ ವಿತರಣೆ ಮಾಡಿ ನಷ್ಟ ಅನುಭವಿಸಿದ್ದೇನೆ ಎನ್ನುತ್ತಿರುವ ಮಹಾಪ್ರಭು, ರಜನಿಕಾಂತ್ ಹಾಗೂ ಚಿತ್ರ ನಿರ್ಮಾಪಕ ರಾಕ್‌ಲೈನ್ ನಷ್ಟ ಪರಿಹಾರ ನೀಡಿಲ್ಲ. 89 ಲಕ್ಷ ರಪಾಯಿ ನಷ್ಟ ಪರಿಹಾರ ಒದಗಿಸುವುದಾಗಿ ನೀಡಿದ್ದ ಭರವಸೆಯನ್ನು ಈಡೇರಿಸಿಲ್ಲ. ಹೀಗಾಗಿ ನನಗೆ ಹಣ ಸಿಗುವವರೆಗೆ ಕಬಾಲಿ ರಿಲೀಸ್ ಆಗಬಾರದು ಎಂದು ಮಹಾಪ್ರಭು ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.