

ಬೆಂಗಳೂರು: ಕನ್ನಡದ ಜನಪ್ರಿಯ ನಟ ಸುದೀಪ್ ಮತ್ತು ಖ್ಯಾತ ಯುವ ನಿರ್ದೇಶಕ ಪವನ್ ಕುಮಾರ್ ಅವರ ಟ್ವಿಟ್ಟರ್ ಪ್ರಶ್ನೋತ್ತರ ಸಾಮಾಜಿಕ ಅಂತರ್ಜಾಲದಲ್ಲಿ ಸಂಚಲನ ಮೂಡಿಸಿದೆ.
'ಹೆಬ್ಬುಲಿ' ಚಿತ್ರದ ನಟ ಸುದೀಪ್, ಪವನ್ ಕುಮಾರ್ ನಿರ್ದೇಶನದ 'ಯು-ಟರ್ನ್' ಸಿನೆಮಾದ ಬಗ್ಗೆ ಮಾತನಾಡಿ, "ಅತಿ ಒಳ್ಳೆಯ ಚಿತ್ರ ಎಲ್ಲರೂ ಅತ್ಯುತ್ತಮವಾಗಿ ನಟಿಸಿದ್ದಾರೆ ಆದರೆ ಕೆಲವು ದಿನಗಳ ಹಿಂದೆ ನೀವು ಬರೆದದ್ದನ್ನು ಓದಿದ್ದೆ. ನೀವು ಸ್ಟಾರ್ ನಟರ ಜೊತೆಗೆ ಕೆಲಸ ಮಾಡುವುದಿಲ್ಲ ಎಂದಿದ್ದಿರಿ. ಪವನ್ ಕುಮಾರ್ ಅವರಿಗೆ ನನ್ನ ಪ್ರಶ್ನೆ, ಈ ಸ್ಟಾರ್ ನಟರೆಲ್ಲಾ ಯಾರ್ಯಾರು?" ಎಂದು ಕೇಳಿ ಟ್ವಿಟ್ಟರ್ ನಲ್ಲಿ ವಿಡಿಯೋವೊಂದನ್ನು ಭಾನುವಾರ ತೇಲಿಬಿಟ್ಟಿದ್ದರು.