ಬಾಗೇಪಲ್ಲಿ ಬಳಿ ನಟ ನಂದಮೂರಿ ಬಾಲಕೃಷ್ಣ ಕಾರು ಪಲ್ಟಿ

ಟಾಲಿವುಡ್ ಖ್ಯಾತ ನಟ ನಂದಮೂರಿ ಬಾಲಕೃಷ್ಣ ಅವರು ಪ್ರಯಾಣಿಸುತ್ತಿದ್ದ ಸಫಾರಿ ಕಾರು ಬಾಗೇಪಲ್ಲಿ ಬಳಿ ಪಲ್ಟಿ ಹೊಡೆದಿದ್ದು, ಗಾಯಗೊಂಡಿರುವ ಬಾಲಕೃಷ್ಣರಿಗೆ...
ನಂದಮೂರಿ ಬಾಲಕೃಷ್ಣ
ನಂದಮೂರಿ ಬಾಲಕೃಷ್ಣ

ಬೆಂಗಳೂರು: ಟಾಲಿವುಡ್ ಖ್ಯಾತ ನಟ ನಂದಮೂರಿ ಬಾಲಕೃಷ್ಣ ಅವರು ಪ್ರಯಾಣಿಸುತ್ತಿದ್ದ ಸಫಾರಿ ಕಾರು ಬಾಗೇಪಲ್ಲಿ ಬಳಿ ಪಲ್ಟಿ ಹೊಡೆದಿದ್ದು, ಗಾಯಗೊಂಡಿರುವ ಬಾಲಕೃಷ್ಣರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಗೇಪಲ್ಲಿ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಪರಗೋಡು ಬಳಿ ಕಾರಿನ ಟೈರ್ ಸ್ಫೋಟಗೊಂಡು ಕಾರು ಪಲ್ಟಿಯಾಗಿದ್ದು, ಘಟನೆಯಲ್ಲಿ ಗಾಯಗೊಂಡ ಬಾಲಕೃಷ್ಣ ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮೂಲಗಳ ಪ್ರಕಾರ ನಟ ಬಾಲಕೃಷ್ಣ ಅವರಿಗೆ ಪ್ರಾಣಾಪಾಯವಾಗಿಲ್ಲ ಎಂದು ತಿಳಿದುಬಂದಿದ್ದು, ಸ್ಥಳಕ್ಕೆ ಬಾಗೇಪಲ್ಲಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com