ಜುಲೈ 9 ರಂದು ಕೋಟಿಗೊಬ್ಬ-2 ಆಡಿಯೋ ಬಿಡುಗಡೆ: ನಿರ್ಮಾಪಕ

ನಟಿ ನಿತ್ಯ ಮೆನನ್ ಮತ್ತು ನಟ ಸುದೀಪ್ ನಟಿಸಿರುವ ಕೋಟಿಗೊಬ್ಬ-2 ಸಿನೆಮಾ ಸಂಪೂರ್ಣಗೊಳ್ಳುವತ್ತ ದಾಪುಗಾಲು ಹಾಕಿದ್ದು, ಜುಲೈ 2 ರಂದು ಟೀಸರ್ ಬಿಡುಗಡೆಗೆ ಚಿತ್ರತಂಡ ಮುಂದಾಗಿದೆ.
ಕೋಟಿಗೊಬ್ಬ-2 ಸಿನೆಮಾದಲ್ಲಿ ನಟಿ ನಿತ್ಯ ಮೆನನ್ ಮತ್ತು ನಟ ಸುದೀಪ್
ಕೋಟಿಗೊಬ್ಬ-2 ಸಿನೆಮಾದಲ್ಲಿ ನಟಿ ನಿತ್ಯ ಮೆನನ್ ಮತ್ತು ನಟ ಸುದೀಪ್
ಬೆಂಗಳೂರು: ನಟಿ ನಿತ್ಯ ಮೆನನ್ ಮತ್ತು ನಟ ಸುದೀಪ್ ನಟಿಸಿರುವ ಕೋಟಿಗೊಬ್ಬ-2 ಸಿನೆಮಾ ಸಂಪೂರ್ಣಗೊಳ್ಳುವತ್ತ ದಾಪುಗಾಲು ಹಾಕಿದ್ದು, ಜುಲೈ 2 ರಂದು ಟೀಸರ್ ಬಿಡುಗಡೆಗೆ ಚಿತ್ರತಂಡ ಮುಂದಾಗಿದೆ. "ನಾವು ಸುದೀಪ್ ಅವರ ಹುಟ್ಟುಹಬಬಕ್ಕೆ ಮೊದಲ ಟೀಸರ್ ಬಿಡುಗಡೆ ಮಾಡಿದ್ದೆವು. ಅದರಲ್ಲಿ ಸುದೀಪ್ ಅವರ ಮೊದಲ ನೋಟ ಕಾಣಿಸಿತ್ತು. ನಮ್ಮ ಎರಡನೇ ಟೀಸರ್ ನಲ್ಲಿ ಕೋಟಿಗೊಬ್ಬ-2 ಸಿನೆಮಾದ ಥೀಮ್ ತಿಳಿಯಲಿದೆ" ಎನ್ನುತ್ತಾರೆ ನಿರ್ಮಾಪಕ ಸೂರಪ್ಪ ಬಾಬು. 
ಹಾಗೆಯೇ ಜುಲೈ 9 ಕ್ಕೆ ಸಿನೆಮಾದ ಆಡಿಯೋ ಬಿಡುಗಡೆ ಮಾಡಲು ಕೂಡ ಚಿತ್ರತಂಡ ಸಜ್ಜಾಗುತ್ತಿದೆ. "ಅದ್ದೂರಿ ಆಡಿಯೋ ಬಿಡುಗಡೆಗೆ ಸಿದ್ಧರಾಗುತ್ತಿದ್ದೇವೆ. ಇದೆ ಸಮಯದಲ್ಲಿ ಪ್ರೇಕ್ಷಕರ ಪ್ರತಿಕ್ರಿಯೆ ತಿಳಿಯಲು ಉದ್ವೇಗವಿದೆ" ಎನ್ನುತ್ತಾರೆ ಸೂರಪ್ಪ ಬಾಬು. 
ಕನ್ನಡ ಮತ್ತು ತಮಿಳಿನಲ್ಲಿ ನಿರ್ಮಾಣವಾಗುತ್ತಿರುವ ಈ ಸಿನೆಮಾ ತಮಿಳಿನಲ್ಲಿ 'ಮುದಿಂಜ ಇವನ್ ಪುದಿ' ಎಂಬ ಹೆಸರಿನಲ್ಲಿ ಬಿಡುಗಡೆಯಾಗುತ್ತಿದ್ದು ಕೆ ಎಸ್ ರವಿಕುಮಾರ್ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಡಿ ಇಮ್ಮಾನ್ ಸಂಗೀತ ನೀಡಿದ್ದು, ರಾಜರತಿನಂ ಸಿನೆಮ್ಯಾಟೋಗ್ರಾಫರ್. 
ಚಿತ್ರರಂಗದಂತೆಯೇ, ಕೋಟಿಗೊಬ್ಬ-2 ಚಿತ್ರತಂಡ ಕೂಡ ಕಬಾಲಿ ಥಿಯೇಟರ್ ಗಳಿಗೆ ಬಂದ ಮೇಲೆ ಸಿನೆಮಾ ಬಿಡುಗಡೆಯ ದಿನಾಂಕ ನಿರ್ಧರಿಸಲು ಕಾಯುತ್ತಿದ್ದಾರೆ. "ಸದ್ಯದ ಯೋಜನೆಯ ಪ್ರಕಾರ ಜುಲೈ ಅಂತ್ಯಕ್ಕೆ ಸಿನೆಮಾ ಬಿಡುಗಡೆ ಮಾಡುವ ಇರಾದೆ ಇದೆ" ಎನ್ನುತ್ತಾರೆ ಸೂರಪ್ಪ ಬಾಬು. 
ಮುಖೇಶ್ ತಿವಾರಿ, ಶರತ್ ಲೋಹಿತಾಶ್ವ, ನಾಸ್ಸರ್, ರವಿಶಂಕರ್ ಮತ್ತು ಚಿಕ್ಕಣ್ಣ ಕೂಡ ಕೋಟಿಗೊಬ್ಬ-2 ತಾರಾಗಣದ ಭಾಗವಾಗಿದ್ದಾರೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com