ಬೆಂಗಳೂರಿನ ದೇವನಹಳ್ಳಿಯಲ್ಲಿ ಚಿರಂಜೀವಿ ಮಗಳ ಮದುವೆ

ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಕಿರಿಯ ಪುತ್ರಿ ಶ್ರೀಜಾ ಕೊನಿದೆಳಾ ಮದುವೆ ಮಾರ್ಚ್ 28ಕ್ಕೆ ಫಿಕ್ಸ್ ಆಗಿದ್ದು, ಶ್ರೀಜಾರನ್ನು ಉದ್ಯಮಿ ಕ್ಯಾಪ್ಟನ್ ಕೃಷ್ಣನ್ ಪುತ್ರ...
ಚಿರಂಜೀವಿ, ಶ್ರೀಜಾ ಕೊನಿದೆಳಾ
ಚಿರಂಜೀವಿ, ಶ್ರೀಜಾ ಕೊನಿದೆಳಾ

ಹೈದರಾಬಾದ್: ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಕಿರಿಯ ಪುತ್ರಿ ಶ್ರೀಜಾ ಕೊನಿದೆಳಾ ಮದುವೆ ಮಾರ್ಚ್ 28ಕ್ಕೆ ಫಿಕ್ಸ್ ಆಗಿದ್ದು, ಶ್ರೀಜಾರನ್ನು ಉದ್ಯಮಿ ಕ್ಯಾಪ್ಟನ್ ಕೃಷ್ಣನ್ ಪುತ್ರ ಕಲ್ಯಾಣ್ ವರಿಸಲಿದ್ದಾರೆ.

ಜೈಪುರದಲ್ಲಿ ಮದುವೆ ನಡೆಸಲು ಈ ಹಿಂದೆ ನಿರ್ಧರಿಸಲಾಗಿತ್ತು. ಆದರೆ ಇದೀಗ ದೇವನಹಳ್ಳಿ ಸಮೀಪದ ಚಿರಂಜೀವಿ ಫಾರ್ಮ್ ಹೌಸ್`ನಲ್ಲಿ ವಿವಾಹ ನೆರವೇರಿಸಲು ನಿರ್ಧರಿಸಲಾಗಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ. ಮದುವೆಗೆ ಬಂಧು-ಬಾಂಧವರಿಗೆ ಮಾತ್ರ ಆಹ್ವಾನ ನೀಡಲಾಗಿದೆಯಂತೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com