ಟಾಮ್‌ ಹಿಡಲ್‌ಸ್ಟನ್‌ ಮುಂದಿನ ಜೇಮ್ಸ್ ಬಾಂಡ್?

ವಿಶ್ವದ ಎಲ್ಲಾ ಸಿನಿರಸಿಕರನ್ನು ತುದಿಗಾಲಿನಲ್ಲಿ ನಿಲ್ಲಿಸಿದ್ದ ಜೇಮ್ಸ್ ಬಾಂಡ್ ಸರಣಿಯ 25ನೇ ಚಿತ್ರಕ್ಕೆ ಹೊಸ ಬಾಂಡ್ ಬರಲಿದ್ದಾರೆ...
ಟಾಮ್ ಹಿಡಲ್‌ಸ್ಟನ್‌
ಟಾಮ್ ಹಿಡಲ್‌ಸ್ಟನ್‌

ಲಂಡನ್: ವಿಶ್ವದ ಎಲ್ಲಾ ಸಿನಿರಸಿಕರನ್ನು ತುದಿಗಾಲಿನಲ್ಲಿ ನಿಲ್ಲಿಸಿದ್ದ ಜೇಮ್ಸ್ ಬಾಂಡ್ ಸರಣಿಯ 25ನೇ ಚಿತ್ರಕ್ಕೆ ಹೊಸ ಬಾಂಡ್ ಬರಲಿದ್ದಾರೆ.

ಬಾಂಡ್ ಸರಣಿಯ 24ನೇ ಚಿತ್ರ ಸ್ಪೆಕ್ಟರ್ ಚಿತ್ರದಲ್ಲಿ ನಟ ಡ್ಯಾನಿಯಲ್ ಕ್ರೇಗ್ ಬ್ರಿಟಿಷ್ ಗೂಢಚಾರಿಯಾಗಿ ನಟಿಸಿದ್ದರು. ನಂತರದ ಬಾಂಡ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಕ್ರೇಗ್ ಹೇಳಿದ್ದರು. ಇದರಿಂದಾಗಿ ಬಾಂಡ್ ಸರಣಿಯ 25ನೇ ಚಿತ್ರದಲ್ಲಿ ಟಾಮ್ ಹಿಡಲ್‌ಸ್ಟನ್‌ ನಟಿಸುವ ಸಾಧ್ಯತೆಗಳು ಹೆಚ್ಚಿವೆ.

ಬಾಂಡ್ ಸರಣಿಯ 25ನೇ ಚಿತ್ರವನ್ನು ನಿರ್ದೇಶಕ ಸ್ಯಾಮ್ ಮೆಂಡೇಸ್ ಮತ್ತು ಬಾರ್ಬರ ಬ್ರೋಕೋಲಿ ನಿರ್ಮಿಸುತ್ತಿದ್ದು, ಪಾರ್ಟಿಯೊಂದರಲ್ಲಿ ಟಾಮ್ ಹಿಡಲ್‌ಸ್ಟನ್‌ ಕೂಡ ಭಾಗಿಯಾಗಿದ್ದು ಸಂಭ್ರಮಿಸಿದ್ದರು. ಇದೇ ಕಾರಣವಾಗಿ ಟಾಮ್ ಮುಂದಿನ ಜೇಮ್ಸ್ ಬಾಂಡ್ ಆಗುವ ಸಾಧ್ಯತೆಗಳು ಹೆಚ್ಚಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com