ಉದ್ಯಮಿ ಮುಸ್ತಫಾ ಜೊತೆ ನಟಿ ಪ್ರಿಯಾಮಣಿ ನಿಶ್ಚಿತಾರ್ಥ: ವರ್ಷಾಂತ್ಯದಲ್ಲಿ ವಿವಾಹ

ಚೆನ್ನೈ ಮೂಲದ ಬ್ಯುಸಿನೆಸ್‌‌‌ಮನ್ ಮುಸ್ತಫಾ ರಾಜ್ ಮತ್ತು ಪ್ರಿಯಾಮಣಿ ನಿಶ್ಚಿತಾರ್ಥ ನೆರವೇರಿದೆ. ನಿನ್ನೆ ಬೆಂಗಳೂರಿನ...
ಪ್ರಿಯಾಮಣಿ ಮತ್ತು ಮುಸ್ತಾಫಾ ರಾಜ್
ಪ್ರಿಯಾಮಣಿ ಮತ್ತು ಮುಸ್ತಾಫಾ ರಾಜ್

ಮುಂಬಯಿ: ಚೆನ್ನೈ ಮೂಲದ ಬ್ಯುಸಿನೆಸ್‌‌‌ಮನ್ ಮುಸ್ತಫಾ ರಾಜ್ ಮತ್ತು ಪ್ರಿಯಾಮಣಿ ನಿಶ್ಚಿತಾರ್ಥ ನೆರವೇರಿದೆ. ನಿನ್ನೆ ಬೆಂಗಳೂರಿನ ಬನಶಂಕರಿಯಲ್ಲಿರುವ ಪ್ರಿಯಾಮಣಿ ಮನೆಯಲ್ಲಿ ಸಂಭ್ರಮದ ವಾತಾವರಣ ಮನೆಮಾಡಿತ್ತು. ಕೆಲವೇ ಆಪ್ತರನ್ನು ಹೊರತುಪಡಿಸಿದ್ರೆ ಹೆಚ್ಚಿನ ಅದ್ದೂರಿತನ ಇಲ್ಲದೇ ಸರಳವಾಗಿ ನಿಶ್ಚಿತಾರ್ಥ ಕಾರ್ಯಕ್ರಮ ಜರುಗಿದೆ.

ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ಪ್ರಿಯಾಮಣಿ ಮತ್ತು ಮುಸ್ತಫಾ ಪರಸ್ಪರ ಉಂಗುರ ಬದಲಾಯಿಸಿಕೊಂಡ್ರು. ಇಬ್ಬರೂ ಬೇರೆ ಬೇರೆ ಧರ್ಮಕ್ಕೆ ಸೇರಿದವರಾಗಿರೋದ್ರಿಂದ ಮದುವೆ ಯಾವ ಸಂಪ್ರದಾಯದಂತೆ ನಡೆಯುತ್ತೆ ಅನ್ನೋ ಕುತೂಹಲ ಎಲ್ಲರಲ್ಲಿತ್ತು. ಸಂಪ್ರದಾಯಗಳನ್ನು ಬದಿಗಿಟ್ಟು ತಾವು ರಿಜಿಸ್ಟರ್ ಮದುವೆ ಆಗೋದಾಗಿ ಪ್ರಿಯಾಮಣಿ ಹೇಳಿದ್ದಾರೆ.

ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಹೀಗೆ ಅನೇಕ ಭಾಷೆಗಳಲ್ಲಿ ಸೈ ಎನಿಸಿಕೊಂಡಿರೋ ಪ್ರಿಯಾಮಣಿ ಅಭಿನಯಕ್ಕಾಗಿ ರಾಷ್ಟ್ರಪ್ರಶಸ್ತಿಯನ್ನೂ ಪಡೆದಿದ್ದಾರೆ.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com