ಸಿನಿಮಾ ಸುದ್ದಿ

ಸಚಿನ್, ಲತಾ ಮಂಗೇಶ್ಕರ್ ​ಗೆ ಅವಹೇಳನ: ನಟ ತನ್ಮಯ್ ವಿರುದ್ಧ ಎಫ್​ಐಆರ್

ಸಚಿನ್, ಲತಾ ಮಂಗೇಶ್ಕರ್ ​ಗೆ ಅವಹೇಳನ: ನಟ ತನ್ಮಯ್ ವಿರುದ್ಧ ಎಫ್​ಐಆರ್
ಲತಾ ಮಂಗೇಶ್ಕರ್ ಮತ್ತು ಸಚಿನ್ ತೆಂಡೂಲ್ಕರ್
Published On :

ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹಾಗೂ ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರನ್ನು ವ್ಯಂಗ್ಯ ಮಾಡಿದ ಆರೋಪದ ಮೇಲೆ ಮಹಾರಾಷ್ಟ್ರ ನವ ನಿರ್ಮಾಣ ಸೇನೆ, ನಟ ತನ್ಮಯ್ ಭಟ್ ವಿರುದ್ಧ ಎಫ್​ಐಆರ್ ದಾಖಲಿಸಿದೆ.

ಎಮ್​ಎನ್ಎಸ್ ಚಿತ್ರಪಟ ಸೇನೆ ಅಧ್ಯಕ್ಷ ಅಮೆಯ ಖೋಪ್ಕರ್ ಅವರು ಶಿವರಾಜ್ ಫಾರ್ಕ್ ಪೊಲೀಸ್ ಠಾಣೆಗೆ ಭೇಟಿ ನೀಡಿ, ಎಐಬಿ ಹಾಸ್ಯ ಸಂಸ್ಥೆ ಮುಖ್ಯಸ್ಥ ತನ್ಮಯ್ ಭಟ್ ವಿರುದ್ಧ ದೂರು ದಾಖಲಿಸಿದ್ದಾರೆ. ಬಳಿಕ ಪ್ರತಿಕ್ರಿಯಿಸಿದ ಎಮ್​ನ್ಎಸ್ ಅಧ್ಯಕ್ಷ, ಈ ರೀತಿ ವಿಡಿಯೋ ಚಿತ್ರೀಕರಣ ಮಾಡುವುದು ಕೀಳು ಮಟ್ಟದ ಪ್ರಚಾರಕ್ಕಾಗಿ. ಕೂಡಲೇ ಇವರನ್ನು ಬಂಧಿಸಬೇಕು. ಇಲ್ಲವಾದರೆ ರಸ್ತೆಗಿಳಿದು ಪ್ರತಿಭಟಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ತನ್ಮಯ್ ಭಟ್ ಅವರ ಈ ಹಾಸ್ಯ ಕಿರುಚಿತ್ರದ ಕುರಿತು ಬಾಲಿವುಡ್ ನಟರಾದ ಅನುಪಮ್ ಖೇರ್ ಹಾಗೂ ರಿತೇಶ್ ದೇಶ್ಮುಖ್ ಸಾಮಾಜಿಕ ಜಾಲತಾಣದಲ್ಲಿ ಕಿಡಿ ಕಾರಿದ್ದಾರೆ. ನನಗೆ 9 ಬಾರಿ ಉತ್ತಮ ಹಾಸ್ಯ ನಟ ಎಂಬ ಪ್ರಶಸ್ತಿ ಲಭಿಸಿದೆ. ಅಷ್ಟೇ ಅಲ್ಲ ನನಗೆ ಉತ್ತಮ ಹಾಸ್ಯ ಪ್ರಜ್ಞೆ ಕೂಡ ಇದೆ. ಆದರೆ ಇಂತಹ ಕೀಳು ಮಟ್ಟದ ಹಾಸ್ಯವನ್ನು ನಿರೀಕ್ಷಿಸಿರಲಿಲ್ಲ ಎಂದು ಹಿರಿಯ ನಟ ಅನುಪಮ್ ಖೇರ್ ತಿಳಿಸಿದ್ದಾರೆ.

ಮಹಾನ್ ಸಾಧಕರ ವಿಚಾರವಾಗಿ ನಿರ್ಮಿಸಿರುವ ಹಾಸ್ಯದಿಂದ ನನಗೆ ಆಘಾತವಾಗಿದೆ. ಇದು ಹಾಸ್ಯವಲ್ಲ ಅಗೌರವ ಎಂದು ರಿತೇಶ್ ದೇಶ್ಮುಖ್  ಹೇಳಿದ್ದಾರೆ.

ಸಚಿನ್ ಹಾಗೂ ಲತಾ ಅಂತರ್ಯುದ್ಧ ಎಂಬ ಶಿರ್ಷಿಕೆ ಅಡಿಯಲ್ಲಿ ಕೀಳು ಮಟ್ಟದ ಹಾಸ್ಯ ನಿರ್ಮಿಸಿದ ತನ್ಮಯ್, ಮುಂದುವರೆದು ಸಚಿನ್ ಹಾಗೂ ವಿರಾಟ್ ಇವರಲ್ಲಿ ಯಾರು ಬೆಸ್ಟ್ ಎಂಬ ಪ್ರಶ್ನೆ ಹಾಕಿದ್ದರು. ಈ ವಿಡೀಯೋ ತುಣುಕನ್ನು ಮೇ 26ರಂದು ಫೇಸ್​ಬುಕ್​ಗೆ ಅಪ್​ಲೋಡ್ ಮಾಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.