ವಿಲನ್ ಗೆ ಎಲ್ಲ ಹಾಡುಗಳನ್ನು ಬರೆದ ನಿರ್ದೇಶಕ ಪ್ರೇಮ್

ಶಿವರಾಜ್ ಕುಮಾರ್ ಮತ್ತು ಸುದೀಪ್ ಮೊದಲ ಬಾರಿಗೆ ಒಟ್ಟಿಗೆ ನಟಿಸುತ್ತಿರುವ ಸಿನೆಮಾ 'ದ ವಿಲನ್' ನಿಶ್ಚಯದಂತೆ ಸ್ವರೂಪ ಪಡೆದುಕೊಳ್ಳುತ್ತಿದೆ. ನಿರ್ದೇಶಕ ಪ್ರೇಮ್ ಈ ಸಿನೆಮಾದ ಎಲ್ಲ 5 ಹಾಡುಗಳಿಗೆ
ಶಿವರಾಜ್ ಕುಮಾರ್
ಶಿವರಾಜ್ ಕುಮಾರ್
Updated on: 
ಬೆಂಗಳೂರು: ಶಿವರಾಜ್ ಕುಮಾರ್ ಮತ್ತು ಸುದೀಪ್ ಮೊದಲ ಬಾರಿಗೆ ಒಟ್ಟಿಗೆ ನಟಿಸುತ್ತಿರುವ ಸಿನೆಮಾ 'ದ ವಿಲನ್' ನಿಶ್ಚಯದಂತೆ ಸ್ವರೂಪ ಪಡೆದುಕೊಳ್ಳುತ್ತಿದೆ. ನಿರ್ದೇಶಕ ಪ್ರೇಮ್ ಈ ಸಿನೆಮಾದ ಎಲ್ಲ 5 ಹಾಡುಗಳಿಗೆ ಗೀತರಚನೆ ಮಾಡಿದ್ದು, ಅವುಗಳಿಗೆ ಸಂಗೀತ ಸಂಯೋಜನೆ ಕಾರ್ಯ ಕೂಡ ಬಹುತೇಕ ಸಂಪೂರ್ಣಗೊಂಡಿದೆ. 
ತಾವು ನಿರ್ದೇಶಿಸುವ ಸಿನೆಮಾಗಳಿಗೆ ಮಾತ್ರ ಹಾಡುಗಳನ್ನು ಬರೆಯುವುದಾಗಿ ತಿಳಿಸುವ ನಿರ್ದೇಶಕ "ದ ವಿಲನ್ ನಲ್ಲಿ ಹೊಸ ರೀತಿಯ ಚಿತ್ರಸಂಗೀತ ಇರುತ್ತದೆ. ಪ್ರತಿಯೊಂದ ಹಾಡಿಗೂ ಶಿವರಾಜ್ ಕುಮಾರ್ ಮತ್ತು ಸುದೀಪ್ ಅಭಿಮಾನಿಗಳು ಹುಚ್ಚೆದ್ದು ಕುಣಿಯಲಿದ್ದಾರೆ ಎಂದು ಆತ್ಮವಿಶ್ವಾಸದಿಂದ ಹೇಳಬಲ್ಲೆ" ಎನ್ನುತ್ತಾರೆ ಪ್ರೇಮ್.
ಪ್ರೇಮ್ ನಿರ್ದೇಶಿಸಿದ್ದ 'ಜೋಗಿ' ಮತ್ತು 'ಜೋಗಯ್ಯ' ಸಿನೆಮಾಗಳಲ್ಲಿ ಶಿವರಾಜ್ ಕುಮಾರ್ ನಟಿಸಿದ್ದಾಗ, ಅವರು ಗೀತರಚನೆ ಮಾಡಿದ್ದರಂತೆ. "ಇದೆ ಮೊದಲ ಬಾರಿಗೆ ಸುದೀಪ್ ಅವರಿಗೆ ಹಾಡು ಬರೆಯುತ್ತಿರುವುದು, ಈ ಹಿಂದೆ ಅವರ ಮಾಣಿಕ್ಯ ಸಿನೆಮಾಗೆ ಗೀತರಚನೆ ಮಾಡಿಕೊಡಲು ಕೇಳಲಾಗಿತ್ತು ಆದರೆ ನಾನು ಗೌರವದಿಂದ ನಿರಾಕರಿಸಿದ್ದೆ. ಏಕೆಂದರೆ ನನ್ನ ನಿರ್ದೇಶನದ ಚಿತ್ರಗಳಿಗಷ್ಟೇ ನಾನು ಗೀತರಚನೆ ಮಾಡುವುದು" ಎನ್ನುತ್ತಾರೆ. 
ಈ ಮಧ್ಯೆ ಲಂಡನ್, ಬೆಂಗಳೂರು ಮತ್ತಿತರ ಚಿತ್ರೀಕರಣದ ಪ್ರದೇಶಗಳನ್ನು ಪ್ರೇಮ್ ಅಂತಿಮಗೊಳಿಸಿದ್ದಾರೆ. ಸಿನೆಮಾ ಚಿತ್ರೀಕರಣಕ್ಕೂ ಮುಂಚಿತವಾಗಿ ಟೀಸರ್ ಮತ್ತು ಫೋಟೋ ಶೂಟ್ ಮಾಡುವ ಇರಾದೆ ಹೊಂದಿರುವ ಪ್ರೇಮ್ "ಇಬರು ನಟರಿಗೂ ವಿಭಿನ್ನ ಫೋಟೋ ಶೂಟ್ ಮಾಡಲಿದ್ದೇವೆ. ಆಕರ್ಷಕ ಶೈಲಿಯ ವಿಗ್ ನಲ್ಲಿ ಇಬ್ಬರೂ ಕಾಣಿಸಿಕೊಳ್ಳಲಿದ್ದಾರೆ. ಅವರ ಹೊಸ ನೋಟವನ್ನು ನೋಡಲು ನಾನು ಉತ್ಸುಕನಾಗಿದ್ದೇನೆ" ಎನ್ನುತ್ತಾರೆ. ಈ ಸಿನೆಮಾಗೆ ಅರ್ಜುನ್ ಜನ್ಯ ಸಂಗೀತ ಒದಗಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com