100 ಕೋಟಿ ಗಳಿಸಿದ ಮಲಯಾಳಂ ಮೊದಲ ಚಿತ್ರ ಪುಲಿಮುರುಗನ್‌

ಖ್ಯಾತ ನಟ ಮೋಹನ್‌ ಲಾಲ್‌ ನಟನೆಯ ಪುಲಿಮುರುಗನ್‌ ಚಿತ್ರ ನೂರು ಕೋಟಿ ಗಳಿಸುವ ಮೂಲಕ ಈ ಸಾಧನೆ ಮಾಡಿದ ಮೊದಲ ಮಲೆಯಾಳಂ ಚಿತ್ರ ..
ಮೋಹನ್ ಲಾಲ್
ಮೋಹನ್ ಲಾಲ್

ತಿರುವನಂತಪುರ: ಖ್ಯಾತ ನಟ ಮೋಹನ್‌ ಲಾಲ್‌ ನಟನೆಯ  ಪುಲಿಮುರುಗನ್‌ ಚಿತ್ರ ನೂರು ಕೋಟಿ ಗಳಿಸುವ ಮೂಲಕ ಈ ಸಾಧನೆ ಮಾಡಿದ ಮೊದಲ ಮಲೆಯಾಳಂ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
 
ಸುಮಾರು 25ಕೋಟಿ ರೂಪಾಯಿ ವೆಚ್ಚದಲ್ಲಿ ತಯಾರಾಗಿದ್ದ  ಪುಲಿಮುರುಗನ್‌ ಅಕ್ಟೋಬರ್‌ 7ರಂದು ಕೇರಳದಾದ್ಯಂತ ಬಿಡುಗಡೆಯಾಗಿತ್ತು, ಮೊದಲ ದಿನವೇ ನಾಲ್ಕು ಕೋಟಿ ಗಳಿಸಿ ಮಲೆಯಾಳಂ ಚಿತ್ರ ರಂಗದ ಮಟ್ಟಿಗೆ ಮೊದಲ ದಿನದ ಗಳಿಕೆಯಲ್ಲೂ ಹೊಸ ಮೈಲುಗಲ್ಲು ಸ್ಥಾಪಿಸಿತ್ತು.
 
ಮನುಷ್ಯ ಹಾಗೂ ಪ್ರಾಣಿ ಸಂಕುಲದ ನಡುವಿನ ಸಂಘರ್ಷದ ಎಳೆಯೊಂದನ್ನು ಇಟ್ಟುಕೊಂಡು ಕತೆ ಎಣೆದಿದ್ದ ನಿರ್ದೇಶಕ ವೈಸಾಖ್‌ ಚಿತ್ರ ರಸಿಕರ ಮನ ಗೆದ್ದಿದ್ದಾರೆ. ಸಾಹಸ ಪ್ರಧಾನ ಚಿತ್ರವಾಗಿರುವ ಇದರಲ್ಲಿ ಮೋಹನ್‌ ಲಾಲ್‌ ಪತ್ನಿಯ ಪಾತ್ರದಲ್ಲಿ ಬೆಂಗಾಳಿ ಚೆಲುವೆ ಕಮಲಿನಿ ಮುಖರ್ಜಿ ಅಭಿನಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com