ಮಾಸ್ತಿ ಗುಡಿ ದುರಂತ, ನಿರ್ಮಾಪಕ ಸುಂದರ್ ಮುಗ್ಧ: ದುನಿಯಾ ವಿಜಯ್

ಮಾಸ್ತಿಗುಡಿ ಸಿನಿಮಾ ಚಿತ್ರೀಕರಣದ ವೇಳೆ ನಡೆದ ದುರಂತದಲ್ಲಿ ಖಳನಟರಾದ ಅನಿಲ್ ಕುಮಾರ್ ಮತ್ತು ಉದಯ್ ರಾಘವ್ ಪ್ರಾಣ ಕಳೆದುಕೊಂಡು ಏಳು ...
ದುನಿಯಾ ವಿಜಯ್ ಮತ್ತು ಸುಂದರ್ ಪಿ.ಗೌಡ್ರು
ದುನಿಯಾ ವಿಜಯ್ ಮತ್ತು ಸುಂದರ್ ಪಿ.ಗೌಡ್ರು
Updated on: 

ಬೆಂಗಳೂರು: ಮಾಸ್ತಿಗುಡಿ ಸಿನಿಮಾ ಚಿತ್ರೀಕರಣದ ವೇಳೆ ನಡೆದ ದುರಂತದಲ್ಲಿ ಖಳನಟರಾದ ಅನಿಲ್ ಕುಮಾರ್ ಮತ್ತು ಉದಯ್ ರಾಘವ್ ಪ್ರಾಣ ಕಳೆದುಕೊಂಡು ಏಳು ದಿನಗಳು ಕಳೆದಿದೆ.

ಈ ವೇಳೆ ನಟ ದುನಿಯಾ ವಿಜಯ್ ಸಿಟಿ ಎಕ್ಸ್ ಪ್ರೆಸ್ ಜೊತೆ ತಮ್ಮ ಪ್ರಾಣ ಸ್ನೇಹಿತರ ಬಗ್ಗೆ ಮಾತನಾಡಿದ್ದಾರೆ. ಮಾಸ್ತಿಗುಡಿ ನಿರ್ಮಾಪಕ ಸುಂದರ್ . ಪಿ ಗೌಡ್ರು. ನಿರ್ದೇಶಕ ನಾಗಶೇಖರ್, ಸಾಹಸ ನಿರ್ದೇಶಕ ರವಿಮರ್ಮಾ, ಯೂನಿಟ್ ಮ್ಯಾನೇಜರ್ ಭರತ್ ಸೇರಿದಂತೆ ಮಾಸ್ತಿಗುಡಿ ಸಿನಿಮಾ ತಂಡದ ಹಲವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ನನ್ನ ಇಬ್ಬರು ಬೆಸ್ಟ್ ಫ್ರೆಂಡ್ ಗಳನ್ನು ಕಳೆದುಕೊಂಡಿದ್ದೇನೆ. ಆದರೆ ಇಲ್ಲಿ ನಾನು ಏನನ್ನೂ ಮಾತನಾಡುವ ಪರಿಸ್ಥಿತಿಯಲ್ಲಿಲ್ಲ. ಆದರೆ ನಿರ್ಮಾಪಕ ಸುಂದರ್ ಮುಗ್ದರು. ಅವರು ಈ ದುರಂತಕ್ಕೆ ಹೊಣೆಯಲ್ಲ, ಸಿನಿಮಾಗೆ ಬಂಡವಾಳ ಹಾಕುವುದಷ್ಟೇ ಅವರ ಜವಾಬ್ದಾರಿ. ಆದರೆ ಅವರನ್ನು ತಪ್ಪಿತಸ್ಥರನ್ನಾಗಿಸಿ ಜೈಲಿನಲ್ಲಿ ಬಂಧಿಸಿರುವುದು ತುಂಬಾ ನೋವು ತಂದಿದೆ ಎಂದು ವಿಜಯ್ ತಮ್ಮ ಬೇಸರವನ್ನು ಹಂಚಿಕೊಂಡಿದ್ದಾರೆ.

ಲಾಕಪ್ ಮತ್ತು ಟಿಕೆಟ್ ಟಿಕೆಟ್ ಎಂಬ ಸಿನಿಮಾಗಳ ಶೂಟಿಂಗ್ ವೇಳೆಯೂ ದುರಂತ ನಡೆದಿತ್ತು, ಆದರೆ ಆಗ ನಿರ್ಮಾಪಕರನ್ನ ಬಂಧಿಸಿರಲಿಲ್ಲ. ಆದರೆ ಮಾಸ್ತಿಗುಡಿ ಶೂಟಿಂಗ್ ದುರಂತಕ್ಕೆ ನಿರ್ಮಾಪಕ ಸುಂದರ್ ಗೌಡ್ರು ಅವರನ್ನು ಹೊಣೆಯಾಗಿಸಲಾಗಿದೆ ಎಂದು ನೋವು ವ್ಯಕ್ತ ಪಡಿಸಿದ್ದಾರೆ.

ನಾನು ಅಸಹಾಯಕ, ನನ್ನ ಕೈಗಳನ್ನು ಕಾನೂನು ಕಟ್ಟಿಹಾಕಿದೆ. ಕಾನೂನು ನನ್ನ ನಿಯಂತ್ರಣದಲ್ಲಿಲ್ಲ. ಎಂದು ವಿಜಯ್ ಬೇಸರ ವ್ಯಕ್ತ ಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com